fbpx
ಸಮಾಚಾರ

RCBಯ ಕಳಪೆ ಪ್ರದರ್ಶನಕ್ಕೆ ಅಸಲಿ ಕಾರಣ ಏನು ಎಂಬುದನ್ನು ಹೇಳಿದರು ಅನಿಲ್ ಕುಂಬ್ಳೆ.

ಐಪಿಎಲ್ ಆರಂಭವಾಗಿ 12 ವರ್ಷಗಳೇ ಸಂದರೂ ಆರ್‌ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಟೂರ್ನಿಯಿಂದ ಹೊರ ಬಂದ ಆರ್‌ಸಿಬಿ ತಂಡದ ಸೋಲಿಗೆ ಅಸಲಿ ಕಾರಣ ಏನು ಎಂಬುದನ್ನು ಸ್ಪಿನ್ ಮಾಂತ್ರಿಕ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಐಪಿಎಲ್​ 12ರ ಆವೃತ್ತಿಯಲ್ಲಿ ಆರ್​ಸಿಬಿ ಮೊದಲ 7 ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡೋದಕ್ಕೆ, ಆಡುವ ಹನ್ನೊಂದರ ತಪ್ಪು ಆಯ್ಕೆಯೇ ಪ್ರಮುಖ ಕಾರಣ. ಟೀಂ ಮ್ಯಾನೇಜ್​ಮೆಂಟ್​ ಸರಿಯಾದ ಆಟಗಾರರನ್ನ ಕಣಕ್ಕಿಳಿಸುವಲ್ಲಿ ವಿಫಲವಾಯ್ತು. ಆರ್​ಸಿಬಿ ತಂಡವು ಬ್ಯಾಟಿಂಗ್​ನಲ್ಲಿ ಎಬಿ ಡಿವಿಲಿಯರ್ಸ್ ಹಾಗು ವಿರಾಟ್​ ಕೊಹ್ಲಿ ಮೇಲೆಯೇ ಹೆಚ್ಚು ಅವಲಂಬನೆಯಾಗಿತ್ತು. ಶಿವಂ ದುಬೆ, ಅಕ್ಷ್​ದೀಪ್​ನಾಥ್ ಸೇರಿ ಇತರೆ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.”

“ಬೌಲಿಂಗ್​ನಲ್ಲಿ ಕೂಡ ತಂಡದ ಪ್ರಮುಖ ಬೌಲರ್​ ಉಮೇಶ್ ಯಾದವ್​ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾದರು. ಸ್ಟೇನ್​ ಬಂದು ಎರಡು ಪಂದ್ಯಗಳಲ್ಲಿ ಮಿಂಚಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಔಟ್​ ಆದ್ರು. ಈ ಎಲ್ಲಾ ಅಂಶಗಳೇ ಈ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ ಕಳಪೆ ಪ್ರದರ್ಶನಕ್ಕೆ ಕಾರಣ” ಎಂದು ಟೀಂ ಇಂಡಿಯಾ ಮಾಜಿ ಕೋಚ್, ಆರ್​ಸಿಬಿ ಮಾಜಿ ಕ್ಯಾಪ್ಟನ್ ಅನಿಲ್​ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top