fbpx
ಸಮಾಚಾರ

ಫೋನಿ ಚಂಡಮಾರುತ: 10 ಕೋಟಿ ರೂ. ನೆರವು ಕರ್ನಾಟಕ ಸರ್ಕಾರ.

ಇತ್ತೀಚೆಗೆ ಫೋನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾ ರಾಜ್ಯದಲ್ಲಿ ಪುನರ್ವಸತಿ ಮತ್ತು ಪರಿಹಾರ ಕ್ರಮಗಳಿಗಾಗಿ ರಾಜ್ಯಸರ್ಕಾರವು 10 ಕೋಟಿ ರೂ. ನೆರವು ನೀಡಿದೆ. ಅಪಾರ ಜನ, ಜಾನುವಾರು, ಆಸ್ತಿಪಾಸ್ತಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊತ್ತವನ್ನು ಸಾದಿಲ್ವಾರು ನಿಧಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಿ, ಬಳಿಕ 2019-20ನೇ ಸಾಲಿನಲ್ಲಿ ಪೂರಕ ಅಂದಾಜುಗಳು ಲೆಕ್ಕ ಶೀರ್ಷಿಕೆಅಡಿ ನಿಧಿಗೆ ಮರುಭರ್ತಿ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಒಡಿಶಾ ರಾಜ್ಯದಲ್ಲಿ ಫೋನಿ ಚಂಡಮಾರುತದಿಂದ ಆಗಿರುವ ಬೃಹತ್ ನಷ್ಟದ ಹಿನ್ನೆಲೆಯಲ್ಲಿ ಚಂಡಮಾರುತ ಸಂತ್ರಸ್ತರಿಗೆ ಹಾಗೂ ಪರಿಹಾರ ಕಾರ್ಯಗಳಿಗಾಗಿ 10 ಕೋಟಿ ರೂಗಳನ್ನು ನೀಡುತ್ತಿರುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ.

ಪೋನಿ ಚಂಡಮಾರುತ :
ಫಣಿ ಚಂಡಮಾರುತದ ಕಾರಣ ಒಡಿಶಾದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ. ಚಂಡಮಾರುತದ ಕಾರಣ ಅಪಾರ ಆಸ್ತಿ ನಷ್ಟವಾಗಿದ್ದು, ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತಿದೆ. ಫೊನಿ ಚಂಡಮಾರುತ ಪೀಡಿತ ಒಡಿಶಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top