fbpx
ಸಮಾಚಾರ

ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್.

ತಮ್ಮನ್ನು ಸ್ಪರ್ಧಾ ಕಣದಿಂದ ಅನರ್ಹಗೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಬಿಎಸ್‍ಎಫ್ ಮಾಜಿ ಯೋಧ ತೇಜ್ ಬಹುದ್ದೂರ್ ಯಾದವ್ ಅವರ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ತೇಜ್‍ಬಹುದ್ದೂರ್ ಯಾದವ್ ಅವರ ಅರ್ಜಿಯನ್ನು ಕೆಲವೇ ನಿಮಿಷಗಳಲ್ಲಿ ವಜಾಗೊಳಿಸಿ ಚುನಾವಣಾ ಆಯೋಗದ ಕ್ರಮವನ್ನು ಎತ್ತಿ ಹಿಡಿದಿದೆ. ತೇಜ್​ಬಹಾದ್ದೂರ್​ಯಾದವ್​ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಪ್ರಮುಖ ಅಂಶಗಳಿಲ್ಲ ಎಂದು ಸುಪ್ರೀಂಕೋರ್ಟೀನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ಯಾದವ್​ ಅವರ ಅರ್ಜಿಯನ್ನು ತಿರಸ್ಕರಿಸಿದರು.

ಹರಿಯಾಣದ ರೇವಾರಿ ಮೂಲದ ತೇಜ್‌ ಬಹದ್ದೂರ್ ಯಾದವ್‌ ಕಳೆದ ಕೆಲವು ವರ್ಷಗಳ ಹಿಂದೆ ಮಾಡಿದ್ದ ವೀಡಿಯೋ ಭಾರಿ ವೈರಲ್‌ ಆಗಿತ್ತು. ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ತೇಜ್‌ ಬಹದ್ದೂರ್‌ ವೀಡಿಯೋ ಮಾಡಿದ್ದು ಭಾರಿ ವೈರಲ್‌ ಆಗಿತ್ತು. ನಂತರ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ತಮ್ಮ ನಾಮಪತ್ರದಲ್ಲಿ ತೇಜ್ ಬಹದ್ದೂರ್ ಕಳಪೆ ಆಹಾರದ ಕುರಿತು ನಮೂದಿಸಿದ್ದು ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top