fbpx
ಸಮಾಚಾರ

ನಟ ಚಂದನ್ ಮದುವೆಯಾದರೆ? ವೈರಲ್ ಫೋಟೋದ ಅಸಲಿಯತ್ತೇನು?

ನಟ ಚಂದನ್ ಮದುವೆ ಆಗಿಬಿಟ್ಟಿದ್ದಾರೆ ಎಂಬ ಅನುಮಾನ, ಕುತೂಹಲ ಈಗ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ, ಸ್ವತಃ ಚಂದನ್ ಅವರು ಪೋಸ್ಟ್ ಮಾಡಿರುವ ಫೋಟೋ. ಈ ಫೋಟೋದಲ್ಲಿ ಅಯೇಶಾ ಎಂಬ ನಟಿಯ ಜೊತೆ ಮದುವೆ ಆಗಿರುವ ಸ್ಟೈಲ್ ನಲ್ಲಿ ಚಂದನ್ ನಿಂತು ಫೋಸ್ ಕೊಟ್ಟರುವುದು ಇಂತಹದೊಂದು ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ. ಅಷ್ಟಕ್ಕೂ, ಈ ಫೋಟೋ ಯಾವುದು? ನಿಜಕ್ಕೂ ಮದುವೆ ಆದ್ರಾ ಚಂದನ್? ಮುಂದೆ ಓದಿ.

ಚಂದನ್ ಮದುವೆಯಾಗಿದ್ದೇನೋ ನಿಜ. ಆದರೆ ನಿಜ ಜೀವನದಲ್ಲಲ್ಲ. ಬದಲಾಗಿ ತೆಲುಗು ಧಾರಾವಾಹಿಯೊಂದಕ್ಕೆ.. ಚಂದನ್ ತೆಲುಗು ಧಾರಾವಾಹಿ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಯೇಶಾ-ಚಂದನ್ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ ಅಷ್ಟೇ.

 

 

ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗಮನ ಸೆಳೆದಿದ್ದ ಚಂದನ್ ನಂತರ ಬಿಗ್ ಬಾಸ್ ಷೋ ನಲ್ಲಿ ಮಿಂಚಿದ್ದರು . ಬಳಿಕ ಕನ್ನಡದ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಚಂದು ಈಗ ತೆಲುಗು ಕಿರುತೆರೆಗೂ ಕಾಲಿಟ್ಟಿದ್ದಾರೆ. ಅಲ್ಲಿ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top