fbpx
ಸಮಾಚಾರ

ನಟ ಆದಿತ್ಯ ವಿರುದ್ಧ ಪೊಲೀಸ್ ದೂರು ದಾಖಲು- ಅಂಥದ್ದೇನಾಯ್ತು?

ಸ್ಯಾಂಡಲ್​​​ವುಡ್​ನಲ್ಲಿ ಮತ್ತೊಬ್ಬ ನಟ ಬಾಡಿಗೆಗಾಗಿ ಕಿರಿಕ್​ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ಡೆಡ್ಲಿ ಸೋಮಾ ಖ್ಯಾತಿಯ ನಟ ಆದಿತ್ಯಾ ಬಾಡಿಗೆ ನೀಡದೇ ಮನೆ ಮಾಲೀಕರಿಗೆ ಅವಾಜ್ ಹಾಕಿ ರೌಡಿಸಂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ದೂರು ದಾಖಲಾಗಿದೆ.

ಆದಿತ್ಯ ತಮ್ಮ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ತಾಯಿ ಹಾಗೂ ತಂಗಿಯೊಂದಿಗೆ ಸದಾಶಿವನಗರದ ಆರ್​ಎಂವಿ ಬಡಾವಣೆಯಲ್ಲಿ ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಆದರೆ, ಕಳೆದ ಏಳು ತಿಂಗಳುಗಳಿಂದ ಬಾಡಿಗೆ ಹಣ ನೀಡಿಲ್ಲ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ 2018ರ ನವೆಂಬರ್​ನಲ್ಲಿ ಕೂಡ ಮನೆ ಮಾಲೀಕ ಪ್ರಸನ್ನ ಸಿವಿಲ್​ ಸಿಟಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಇಂದು ಮನೆ ಮನೆ ಖಾಲಿ ಮಾಡಿಸಿ ಕೊಡುವಂತೆ ಠಾಣೆಗೆ ದೂರು ನೀಡಿದ್ದಾರೆ.

ನಾಲ್ಕು ವರ್ಷದ ಹಿಂದೆ ತಿಂಗಳಿಗೆ 40 ಸಾವಿರ ರೂ. ನಂತೆ ಬಾಡಿಗೆಗೆ ನೀಡಲಾಗಿತ್ತು. ಬಳಿಕ ಈಗ ಮನೆ ಮಾಲೀಕರು 48 ಸಾವಿರ ಬಾಡಿಗೆಗೆ ಏರಿಸಿದ್ದಾರೆ. ಕಳೆದ ಏಳು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದಕ್ಕೆ ಮನೆ ಮಾಲೀಕರಾದ ಪ್ರಸನ್ನ ಜೊತೆ ಜಗಳವಾಡಿದ್ದಾರೆ. ಆದಿತ್ಯ ಇದುವರೆಗೆ 2 ಲಕ್ಷ 88 ಸಾವಿರ ಹಣ ಬಾಕಿ ನೀಡಬೇಕಿದೆ ಎಂದು ಹೇಳಲಾಗಿದೆ.

ನಟ ಆದಿತ್ಯ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಅವರು ಕೂಡ ಮನೆ ಮಾಲೀಕರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಬಾಡಿಗೆ ಕೇಳುತ್ತಿದ್ದಾರೆ. ಹಾಗಾಗಿ ಬಾಡಿಗೆಯನ್ನೂ ಕೊಟ್ಟಿಲ್ಲ. ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇವೆ. ಮೇ 28ರಂದು ವಿಚಾರಣೆ ನಡೆಯಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top