fbpx
ಸಮಾಚಾರ

ಫಲಿತಾಂಶಕ್ಕೂ ಮುನ್ನವೇ ಮಂಡ್ಯ ರಾಜಕಾರಣದಲ್ಲಿ ಸಕ್ರಿಯರಾದ ನಿಖಿಲ್.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಇಡೀ ಇಂಡಿಯಾವೇ ಮಂಡ್ಯ ಮೇಲೆ ಕಣ್ಣು ನೆಟ್ಟಿತ್ತು. ಅದರಂತೆ ಮಂಡ್ಯದಲ್ಲಿ ದಾಖಲೆಯ ಶೇಕಡ 80ರಷ್ಟು ಮತದಾನ ಕೂಡ ಆಗಿದೆ. ಮತದಾನ ನಂತರ ಮಂಡ್ಯದಲ್ಲಿ ಹಲವಾರು ಬೆಳವಣಿಗೆಗಳು ಮಂಡ್ಯದಲ್ಲಿ ನಡೆಯುತ್ತಿವೆ.

ಈ ನಡುವೆ ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಭೆಗೆ ಇಂದು ಮಂಡ್ಯದ ಕೆ.ಆರ್ ಪೇಟೆಗೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಕೆ.ಆರ್ ಪೇಟೆ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಪಕ್ಷದ ಪೂರ್ವಭಾವಿ ಸಭೆ ನಡೆಯಲಿದೆ. ಮಂಡ್ಯ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ ನೇತೃತ್ವದಲ್ಲಿ ಜೆಡಿಎಸ್ ಸಭೆ ನಡೆಯಲಿದೆ.

ಚುನಾವಣೆ ನಂತರ ಔಪಚಾರಿಕವಾಗಿ ಒಮ್ಮೆ ಮಂಡ್ಯಕ್ಕೆ ಆಗಮಿಸಿ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ನಿಖಿಲ್ ಕೃತಜ್ಞತೆ ಸಲ್ಲಿಸಿದ್ದರು. ಬಳಿಕ ಮತ್ತೆ ಮಂಡ್ಯಗೆ ಬಂದಿರಲಿಲ್ಲ. ಇದೀಗ ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಸಭೆಯಲ್ಲಿ ಪ್ರಥಮವಾಗಿ ನಿಖಿಲ್ ಪಾಲ್ಗೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top