fbpx
ಸಮಾಚಾರ

ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕನಿಗೆ ಸರಿಯಾಗಿ ಠಕ್ಕರ್ ಕೊಟ್ಟ ಪ್ರಯಾಣಿಕ.

ಸರ್ಕಾರೀ ಬಸ್ ಕಂಡಕ್ಟರ್ ಒಬ್ಬನು ಹುಂಜಕ್ಕೂ ಟಿಕೆಟ್ ನೀಡಿರುವ ಘಟನೆ ಕೋಲಾರದಲ್ಲಿ ನಡೆದಿದ್ದು ಟಿಕೆಟ್ ನೀಡಿದ ಕಂಡಕ್ಟರ್ ಗೆ ಪ್ರಯಾಣಿಕನು ಸರಿಯಾಗಿಯೇ ಠಕ್ಕರ್ ಕೊಟ್ಟಿದ್ದಾನೆ. ಹುಂಜಕ್ಕೆ 15 ರುಪಾಯಿ ಟಿಕೆಟ್ ನೀಡಿದ್ದನ್ನು ನೋಡಿ ಕೆರಳಿದ ಪ್ರಯಾಣಿಕ ಟಿಕೆಟ್ ನೀಡಿದ ಮೇಲೆ ಸೀಟು ಸಿಗಬೇಕಲ್ವಾ? ಸೀಟು ಕೊಡಿ ಎಂದು ಕೇಳಿ ಟಿಕೆಟ್ ಗೆ ದುಡ್ಡು ಕೊಟ್ಟ ಕಾರಣಕ್ಕೆ ಹುಂಜವನ್ನು ಸೀಟ್ ಮೇಲೆಯೇ ಕುಳ್ಳಿರಿಸಿಕೊಂಡು ಪ್ರಯಾಣ ಮಾಡಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಘಟಕಕ್ಕೆ ಸೇರಿರುವ ಬಸ್ಸು ಇದಾಗಿದ್ದು ಕೋಲಾರದಿಂದ ಎಚ್.ಕ್ರಾಸ್ ಗೆ ಹೋಗುವ ಪ್ರಯಾಣಿಕನಿಂದ ಹುಂಜಗೂ ಟಿಕೆಟ್ ಪಡೆದಿದ್ದಾನೆ. ಟಿಕೆಟ್ ನೀಡಿದ್ದಕ್ಕೆ ಹುಂಜವನ್ನು ಸೀಟಿನ ಮೇಲೆ ಕೂರಿಸಿಕೊಂಡು ಪ್ರಯಾಣಿಕ ಪ್ರಯಾಣಿಸಿದ್ದಾನೆ.

ಮೇ 7ನೇ ತಾರೀಖು ಈ ಘಟನೆ ನಡೆದಿದ್ದು ನಾನು ಹುಂಜಕ್ಕೂ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ಬೇರೆಯವರಿಗೆ ಸೀಟು ಬಿಡದೆ ಹುಂಜದ ಮಾಲೀಕ ತನ್ನ ಪಕ್ಕದಲ್ಲೇ ಕೂರಿಸಿಕೊಂಡಿರುವ ಪೋಟೋ ಹಾಗೂ ಬಸ್ ಟಿಕೆಟ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top