fbpx
ಸಮಾಚಾರ

ಸುಖಮಯ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಪಬ್ಜಿ ಗೇಮ್.

ಮೂಬೈಲ್ ಕೈಲಿದ್ದರೆ ಸಾಕು ಜಗವೇ ಅಂಗೈನಲ್ಲಿ ಎಂಬ ಈ ಕಾಲಘಟ್ಟದಲ್ಲಿ ಯುವ ಜನತೆ ತರಹೇವಾರಿ ವೀಡಿಯೋ ಗೇಮ್ ಗಳ ಹಿಂದೆ ಬಿದ್ದಿರುವುದಂತೂ ಸುಳ್ಳಲ್ಲ.

ಅತೀ ಕಡಿಮೆ ಸಮಯದಲ್ಲೇ ವಿಶ್ವಾದ್ಯಂತ ಜನಪ್ರೀಯತೆ ಗಳಿಸಿರುವ ಆನ್‌ಲೈನ್ ಗೇಮ್‌ ಗಳಲ್ಲಿ ಅಗ್ರ ಸ್ಥಾನದಲ್ಲಿರುವ ಪಬ್ಜಿ ಗೇಮ್ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಲ್ಲಿದೆ. ಪಬ್ಜಿ ಆಟಕ್ಕೆ ಅಡಿಕ್ಟ್ ಆದ ಹಲವಾರು ಮಂದಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವರದಿಗಳು ಬರುತ್ತಲೇ ಇರುತ್ತವೆ. ಕೆಲವು ದೇಶಗಳಲ್ಲಂತೂ ಪಬ್ಜಿಯಿಂದಾದ ಅನುಹಾತಗಳನ್ನು ತೀವ್ರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರಗಳು ತಮ್ಮ ದೇಶಗಳಲ್ಲಿ ಪಬ್ಜಿ ಗೇಮ್ ಅನ್ನು ನಿಷೇಧಿಸಿದ ಉದಾಹರಣೆಗಳೂ ಇವೆ.

ಅಪ ಕೀರ್ತಿಯಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದ ಪಬ್ಜಿ ಆನ್ಲೈನ್ ಗೇಮ್ ಗೆ ಇದೀಗ ಮತ್ತೊಂದು ಕಪ್ಪು ಚುಕ್ಕಿ ಅಂಟುಕೊಂಡಿದ್ದು. ‘ಪಬ್ಜಿ ಗೇಮ್’ ಅಬುಧಾಬಿ ಮೂಲದ ದಂಪತಿಗಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಪಬ್ಜಿ ಆಟವಾಡುವುದನ್ನು ನಿಲ್ಲಿಸುವಂತೆ ಪತಿಯೊಬ್ಬರು ತನ್ನ ಪತ್ನಿಯ ಬಳಿ ಪಜಗಳವಾಡಿದ್ದನ್ನೇ ಕಾರಣವನ್ನಾಗಿರಿಸಿಕೊಂಡ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

“ತನ್ನ ಮನರಂಜನೆಯ ಆಯ್ಕೆಯ ಹಕ್ಕನ್ನು ತನ್ನ ಪತಿ ಕಿತ್ತುಕೊಳ್ಳಲು ಯತ್ನಿಸುತ್ತಿದ್ದು, ಪಬ್ಜಿ ಆಟದಿಂದ ತಾವು ಪಡೆಯುತ್ತಿದ್ದ ಆನಂದ ಮತ್ತು ಸೌಕರ್ಯಗಳು ದೊರೆಯುತ್ತಿಲ್ಲ ಎಂದು ಮಹಿಳೆ ವಿಚ್ಛೇದನಕ್ಕೆ ಕಾರಣಗಳನ್ನು ನೀಡಿದ್ದಾರೆ” ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top