fbpx
ಸಮಾಚಾರ

ಮೋದಿ ರಾಜಕೀಯ ವೈಫಲ್ಯತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ.

ಗೋದ್ರಾ ಹತ್ಯಾಕಾಂಡದ ಬಳಿಕ ೨೦೦೨ ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅಂದಿನ ಪ್ರಧಾನಿಯಾಗಿದ್ದ ಅಠಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು ಎನ್ನುವ ಮೂಲಕ ಮಾಜಿ ಕೇಂದ್ರ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ.

ಭೋಪಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಾಜಿ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ. ಗೋದ್ರಾ ಹತ್ಯಾಕಾಂಡದ ನಂತರದ ಬೆಳವಣಿಗೆಗಳ ಕುರಿತು ಮಾತನಾಡುವುದರ ಜೊತೆಗೆ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ‘ಐಎನ್ಎಸ್ ವೀರಾಟ್’ ನೌಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ಎಂಬ ಪ್ರಧಾನಿ ಮೋದಿಯವರ ಟೀಕೆಗೆ ಪ್ರತಿಕ್ರೀಯೆ ನೀಡಿದ್ದು, ಅಂದಿನ ನೌಕಾಧಿಕಾರಿಗಳೇ ಈ ವಿವಾದದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ತದನಂತರವೂ ಆಧಾರ ರಹಿತವಾಗಿ ಟೀಕೆಗಳನ್ನು ಮಾಡುತ್ತ ಸುಳ್ಳಿನ ಸರಮಾಲೆ ಕಟ್ಟುತ್ತಿರುವುದು ದೇಶದ ಪ್ರಧಾನಿ ವರ್ಚಸ್ಸಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಗುಜರಾತ್ ನಲ್ಲಿ ೨೦೦೨ ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡದಲ್ಲಿ ನೂರಾರು ಜನ ಅಮಾಯಕರ ಮಾರಣ ಹೋಮವಾಗಿತ್ತು. ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಬಗೆಗೆ ಅಸಹನೆ ಹೊಂದಿದ್ದ ಅಂದಿನ ಪ್ರಧಾನಿ ವಾಜಪೇಯಿ, ಮೋದಿಯವರಿಗೆ ಮುಖ್ಯಮಂತ್ರಿ ಸ್ಥಾನದಿಂದ ರಾಜಿನಾಮೆ ನೀಡುವಂತೆ ಆದೇಶ ಹೊರಡಿಸಲು ಮುಂದಾಗಿದ್ದರು. ಎಂಬ ಸ್ಪೋಟಕ ಸುದ್ದಿಯನ್ನು ವಾಜಪೇಯಿ ಕ್ಯಾಬಿನೇಟ್ ನಲ್ಲಿ ಸಚಿವರಾಗಿದ್ದ ಸಿನ್ಹಾ ಹೊರ ಹಾಕಿದ್ದಾರೆ,

“2002 ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಗೆ ತೇರುಳತ್ತಿರುವಾಗ, ವಾಜಪೇಯಿಯವರು. ಮೋದಿ ರಾಜೀನಾಮೆಯ ವಿಷಯವನ್ನು ಪ್ರಸ್ತಾಪಿಸಿದ್ದರು, ಒಂದು ವೇಳೆ ಮೋದಿ ರಾಜಿನಾಮೆ ನೀಡಲು ನಿರಾಕರಿಸಿದರೆ ಗುಜರಾತ್ ಸರಕಾರವನ್ನು ವಜಾಗೊಳಿಸಲಾಗುವ ನಿರ್ಧಾರಕ್ಕೂ ವಾಜಪೇಯಿ ಮುಂದಾಗಿದ್ದರು, ನನಗಿರುವ ಮಾಹಿತಿಯ ಪ್ರಕಾರ ಈ ವಿಷಯವಾಗಿಯೇ ಪಕ್ಷದಲ್ಲಿ ಆಂತರಿಕ ಸಭೆಯೂ ನಡೆದಿತ್ತು. ಆದರೆ ಅಂದಿನ ಗೃಹ ಮಂತ್ರಿಯಾಗಿದ್ದ ಎಲ್.ಕೆ ಅಡ್ವಾಣಿ ಅಟಲ್ ಜಿ ಯವರ ನಿರ್ಧಾರಕ್ಕೆ ಪ್ರತಿರೋಧ ಒಡ್ಡು ಮೂಲಕ ಮೋದಿಯನ್ನು ಅಧಿಕಾರದಿಂದ ವಜಾಗೊಳಿಸಿದ್ದೇ ಆದಲ್ಲಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಅಡ್ವಾಣಿ ಮಾತಿಗೆ ಕಟ್ಟುಬಿದ್ದ ವಾಜಪೇಯಿ ತಮ್ಮ ನಿರ್ಧಾರವನ್ನು ಕೈ ಬಿಟ್ಟರು. ಆವತ್ತು ರಾಜಕೀಯವಾಗಿ ಮೋದಿಯವರಿಗೆ ಮರು ಜೀವ ನೀಡಿದ್ದ ಅಡ್ವಾಣಿಯವರನ್ನು ಇಂದು ಮೋದಿ, ಅಮಿತ್ ಷಾ ಹಾಗೂ ಬಿಜೆಪಿಗರು ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಖಂಡನೀಯ ಎನ್ನುವ ಮೂಲಕ ಕತೆಯ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯ ವೈಫಲ್ಯಗಳನ್ನು ಮುಚ್ಚಿಡಲು ೭೦ ವರ್ಷದ ಇತಿಹಾಸ ಕೆದುಕುವ ವಿಫಲ ಪ್ರಯತ್ನ ನಡೆಸುತ್ತಿದೆ. ಜೊತೆಗೆ ಅಪ್ಪಟ ಸುಳ್ಳುಗಳ ಮೂಲಕವೇ ದೇಶದ ಜನರ ಹಾದಿ ತಪ್ಪಿಸುತ್ತಿದೆ. ದೂರದ ಪಾಕಿಸ್ತಾನವನ್ನು ಪ್ರಚಾರದ ಸಗಟಾಗಿ ಉಪಯೋಗಿಸುತ್ತಿರುವ ಬಿಜೆಪಿಗರು ಚೀನಾದ ವಿಷ‍ಯವನ್ನೇಕೆ ಮುನ್ನಲೆಗೆ ತರುತ್ತಿಲ್ಲ? ಚೀನಾ ಬಗೆಗಿನ ವಿಷಯಗಳ ಪ್ರಸ್ತಾವನೆಯಿಂದ ಬಿಜೆಪಿಗೆ ಯಾವುದೇ ರಾಜಕೀಯ ಲಾಭ ಇಲ್ಲವೆಂಬುದು ತಿಳಿದಿದೆ. ಅದಕ್ಕಾಗಿಯೇ ಪಾಕಿಸ್ತಾನ ಹಾಗೂ ಭಾರತೀಯ ಸೈನ್ಯವನ್ನೂ ತಳಕು ಹಾಕಿಕೊಂಡು ಚುನಾವಣಾ ಪ್ರಚಾರ ನಡೆಸುತ್ತಿರುವ ಮೋದಿ ಹಾಗೂ ಬಿಜೆಪಿಗರಿಗೆ ನೈತಿಕತೆಯೇ ಇಲ್ಲದಂತಾಗಿದೆ ಎಂದು ಸಿನ್ಹಾ ಬಿಜೆಪಿಗರನ್ನು ಜರಿದಿದ್ದಾರೆ.

ಮೋದಿ ಸರ್ಕಾರದ ಈ ನೀತಿಗಳಿಂದ ಮುಂಬರುವ ಸರ್ಕಾರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top