fbpx
ಸಮಾಚಾರ

ಎಸ್ ಎಸ್ ಸಿ ಪರೀಕ್ಷೆಯ ತಾತ್ಕಾಲಿಕ ಕೀ ಆನ್ಸರ್ ಪ್ರಕಟ

ಎಸ್ ಎಸ್ ಸಿ ಪರೀಕ್ಷೆಯ ತಾತ್ಕಾಲಿಕ ಕೀ ಆನ್ಸರ್ ಪ್ರಕಟ. ಫಲಿತಾಂಶಕ್ಕಾಗಿ ಕೂಡಲೇ ಈ ವೆಬ್ ವಿಳಾಸಕ್ಕೆ ಭೇಟಿ ನೀಡಿ.

‘ಎಸ್ ಎಸ್ ಸಿ’ ಪರೀಕ್ಷೆಯ ತಾತ್ಕಾಲಿಕ ಕೀ ಆನ್ಸರ್ ಪ್ರಕಟವಾಗಿದ್ದು, ಸಿಬ್ಬಂದಿ ನೇಮಕಾತಿ ಆಯೋಗ ಸಶಸ್ತ್ರ ಪೋಲಿಸ್ ಪಡೆಯ ಅಂದರೆ CPF, SSF, RIFLEMAN, ಪರೀಕ್ಷೆಗಳ 2018 ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ USERNAME ಮತ್ತು PASSWORD ಬಳಸಿ ಕೀ ಉತ್ತರಗಳನ್ನು ನೋಡಬಹುದಾಗಿದೆ. ಕಂಪ್ಯೂಟರ್ ಆಧಾರಿತ SSC (GD) ಪರೀಕ್ಷೆಯು ಫೆಬ್ರವರಿ 11 ರಿಂದ ಮಾರ್ಚ್ 11 ರ ವೆರೆಗೆ ನಡೆದಿತ್ತು.

ಸರಿ ಉತ್ತರಗಳ ಕುರಿತಾಗಿ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ 100 ರೂಪಾಯಿ ಶುಲ್ಕದೊಂದಿಗೆ MAY 15 ರ ಸಂಜೆ 6 ಗಂಟೆಯ ಒಳಗಾಗಿ ಆನ್ಲೈನ್ ಮೂಲಕ ತಮ್ಮ ದೂರು ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ವೆಬ್ ಸೈಟ್ ನಲ್ಲಿ Response Sheet ಅನ್ನು ಕೂಡ ನೀಡಲಾಗಿದೆ. ನಿಗದಿತ ಸಮಯದ ಬಳಿಕ ಕೀ ಉತ್ತರಗಳನ್ನು ವೆಬ್ಸೈಟ್ ನಿಂದ ತೆಗೆಯಲ್ಪಡುವ ಕಾರಣದಿಂದಾಗಿ ಸಂಬಂಧ ಪಟ್ಟ ಅಭ್ಯರ್ಥಿಗಳು ಉತ್ತರಗಳ ಪಿಡಿಎಫ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ. ಉತ್ತರಗಳ ಮಾಹಿತಿ ಪಡೆಯಲು ಮತ್ತು ಆಕ್ಷೇಪಣೆ ಸಲ್ಲಿಸಲು ‘WWW.SSC.nic.in‘ ವೆಬ್ ವಿಳಾಸಕ್ಕೆ ಭೇಟಿ ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top