fbpx
ಸಮಾಚಾರ

ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿ ವಿಕೃತಿ ಮೆರೆದ ಕಿಡಿಗೇಡಿಗಳು – ವಿಡಿಯೋ ವೈರಲ್.

ಬೆಟ್ಟದ ಕಲ್ಲು ಬಂಡೆಗಳ ಮೇಲೆ ಕುಳಿತಿದ್ದ ಕರಡಿಯೊಂದು ಪ್ರವಾಸಿಗರ ಕೀಟಲೆ ದುರ್ಬುದ್ಧಿಯಿಂದಾಗಿ, ಬೆಟ್ಟದಿಂದ ಜಾರಿ ಪ್ರಪಾತದಲ್ಲಿ ಹರಿಯುತ್ತಿದ್ದ ನದಿಗೆ ಬಿದ್ದಿರುವ ಮನಕಲಕುವ ಘಟನೆ ಕಾರ್ಗಿಲ್‌ನಲ್ಲಿ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿನತ್ತ ಬಂದ ಕರಡಿಯನ್ನು ಜನರು ಕಲ್ಲಿನಿಂದ ಹೊಡೆದಿದ್ದಾರೆ. ಎತ್ತರದ ಶಿಖರದಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.

ಎಂಟು ಸೆಕೆಂಡ್‌ಗಳ ಈ ವಿಡಿಯೊವನ್ನು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಮಾಜಿ ನಿರ್ದೇಶಕ ಮೆಹಮೂದ್‌ ಶಹಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಗ್ರಾಮಸ್ಥರು ಅಟ್ಟಾಡಿಸಿಕೊಂಡು ಬರುವಾಗ ಕರಡಿಯು ಕಡಿದಾದ ಬೆಟ್ಟ ಹತ್ತಲು ಪ್ರಯತ್ನಿಸುತ್ತದೆ. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ನಿಯಂತ್ರಣ ತಪ್ಪಿದ ಕರಡಿ ನದಿಗೆ ಉರುತ್ತಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ. ಪ್ರಾಣ ಉಳಿಸಿಕೊಳ್ಳಲು ಕರಡಿ ಮತ್ತೆ ಮೇಲೆ ಬರಲು ಪ್ರಯತ್ನಿಸಿದೆ.

 

 

ಕರಡಿಗಾದ ತೊಂದರೆಗೆ ಖೇದ ವ್ಯಕ್ತಪಡಿಸಿರುವ ಜನ, ಅದಕ್ಕೆ ಕಾಟ ಕೊಟ್ಟ ಕಿಡಿಗೇಡಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಕರಡಿಯ ಮೇಲೆ ಕಲ್ಲೆಸೆದವರನ್ನು ಗುರುತಿಸಿ ಬಂಧಿಸಬೇಕು ಎಂದೂ ಹಲವರು ಆಗ್ರಹಿಸಿದ್ದರು.ಈ ಕುರಿತು ತನಿಖೆ ನಡೆಸಲು ಕಾರ್ಗಿಲ್‌ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top