fbpx
ಸಮಾಚಾರ

ಜಿಮ್ ಗೆ ತೆರಳುವ ಮುನ್ನ ಈ ವಿಷಯಗಳು ನಿಮ್ಮ ಗಮನದಲ್ಲಿರಲಿ

ಆಕರ್ಷಕ ಹಾಗೂ ಸದೃಢ ಮೈಕ್ಕಟ್ಟು ಹೊಂದಬೇಕೆನ್ನುವ ಕನಸು ಸಹಜವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ದೇಹದಲ್ಲಿ ಈ ಮಾರ್ಪಾಡನ್ನು ತರುವುದು ಯೋಚಿಸಿದಷ್ಟು ಸುಲಭವಲ್ಲ. ಅನೇಕ ಮಂದಿ ತಿಂಗಳಲ್ಲೇ ತೂಕ ಕಡಿಮೆ ಮಾಡಿಕೊಳ್ಳಬೇಕು ಆತ್ಯಾಕರ್ಷಕ ದೇಹವನ್ನು ತಮ್ಮದಸಾಗಿಸಿಕೊಳ್ಳಬೇಕೆಂದದು ಜಿಮ್ ನತ್ತ ಮುಖ ಮಾಡುತ್ತಾರೆ. ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ ದೇಹಾರೋಗ್ಯಕ್ಕೆ ಸಂಬಂಧಿಸಿ ಜಿಮ್‌ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕೂಡ ಬಹುಮುಖ್ಯವಾಗುತ್ತದೆ. ಜತೆಗೆ ಶಿಸ್ತುಬದ್ಧ ಜೀವನ ಕ್ರಮ, ಆಹಾರ ಸೇವನೆಯಲ್ಲಿ ಕಾಳಜಿಯಿಂದಿರಬೇಕಾಗುತ್ತದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಯೋಗ, ಪ್ರಾಣಾಯಾಮ, ಇವೆಲ್ಲವೂ ದೂರದ ಮಾತುಗಳಾಗಿಯೇ ಉಳಿದಿರುವಾಗ ಯುವ ಜನತೆಯನ್ನು ಹೆಚ್ಚು ಸೆಳೆಯುತ್ತಿರುವುದು ಜಿಮ್ ಎಂದರೆ ತಪ್ಪಾಗಲಾರದು. ತೂಕ ಕಡಿಮೆ ಮಾಡಿಕೊಂಡು ಸಮಸ್ಯೆಗಳಿಂದ ದೂರವಿರಬೇಕು, ಜತೆಗೆ ಆಕರ್ಷಕ ಮೈಕಟ್ಟು ಹೊಂದಬೇಕು ಎಂಬ ಆಲೋಚನೆಯೊಂದಿಗೆ ಜಿಮ್‌ನತ್ತ ಮುಖ ಮಾಡುವವರು ಹಲವರಿದ್ದಾರೆ. ಆಧುನಿಕ ಯಾಂತ್ರಿಕ ವೈದ್ಯನಂತೆ ಇರುವ ಜಿಮ್‌ ಸದೃಢ ಮೈಕಟ್ಟಿಗೆ ಸಶಕ್ತವಾಗಿದೆ ಎನ್ನುವುದು ನಿಜ. ಆದರೆ ಅತಿಯಾದ ದೇಹದಂಡನೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಜಿಮ್‌ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸರಿ ಹೊಂದುವ ವ್ಯಾಯಾಮಗಳಿರುತ್ತವೆ. ಜಿಮ್‌ಗೆ ಹೋದರೆ ತೂಕ ಬೇಗ ಕಡಿಮೆಯಾಗುವುದು ಸುಳ್ಳಲ್ಲ. ಜಿಮ್‌ ಚಟುವಟಿಕೆಗಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಹಳ ನೆರವಾಗುತ್ತವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಈ ಆಧುನಿಕ ತಾಂತ್ರಿಕ ವ್ಯಾಯಾಮಗಳು ಅಡ್ಡ ಪರಿಣಾಮಗಳನ್ನುಂಟು ಮಾಡುವುದೇ ಹೆಚ್ಚು.

ಆಹಾರ ಕ್ರಮದ ಮೇಲೆ ಖಾಳಜಿ ಹೊಂದಿರಲೇಬೇಕು.
ಜಿಮ್‌ಗೆ ಹೋಗುವುದೆಂದರೆ ಕೇವಲ ವ್ಯಾಯಾಮ ಮಾಡಿ ಬರುವುದಲ್ಲ. ನಿಮ್ಮ ಆಹಾರಕ್ರಮವೂ ನಿಯಮಿತವಾಗಿರಬೇಕು. ಜಿಮ್‌ ಮಾಡಿ ದೇಹ ದಣಿಯುವುದರಿಂದ ಕೊಬ್ಬಿನ ಆಹಾರವನ್ನು ಸೇವಿಸಬಾರದು. ಆದಷ್ಟು ಗುಣಮಟ್ಟದ ಪ್ರೋಟಿನ್‌ ಮತ್ತು ಕಾರ್ಬೋಹೈಡ್ರೇಟ್ ಅಂಶವುಳ್ಳ ಆಹಾರವನ್ನು ಸೇವಿಸಬೇಕು. ಜಿಮ್‌ನಲ್ಲಿ ವ್ಯಾಯಾಮ ಮಾಡಿದ ತಕ್ಷಣವೇ ನೀರು ಕುಡಿಯುವುದೂ ಹಿತಕರವಲ್ಲ.

ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ದೇಹಾರೋಗ್ಯ ಉತ್ತಮವಾಗಿರುತ್ತದೆ. ಹೆಸರು ಕಾಳು ಸ್ನಾಯ ಬಲವರ್ಧನೆಗೆ ಉತ್ತಮ ಆಹಾರವಾಗಿದೆ. ಆದಷ್ಟು ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದು ಹಿತಕರ. ಸಿಹಿ ಗೆಣಸು, ಡ್ರೈಫ್ರುಟ್ಸ್‌, ಆಮ್ಲೆಟ್‌, ಗ್ರೀನ್‌ ಟೀ, ಶುಂಠಿ ಟೀ ಜಿಮ್‌ ಮಂದಿಗೆ ಉಪಯುಕ್ತ‌ ಆಹಾರಗಳು.

ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಜಿಮ್‌ ಮಾಡುವುದನ್ನು ರೂಢಿಸಿಕೊಳ್ಳಿ.
ದಿನದಲ್ಲಿ ಕನಿಷ್ಠ ಒಂದು ಗಂಟೆ ಕಾಲ, ಗರಿಷ್ಠ ಮೂರು ಗಂಟೆಗಳ ಕಾಲ ನೀವು ಜಿಮ್‌ನಲ್ಲಿ ತೊಡಗಿಸಿಕೊಳ್ಳಬಹುದು. ಒಂದು ಗಂಟೆಗಿಂತ ಕಡಿಮೆ ಅವಧಿ ಜಿಮ್ ಮಾಡುವುದರಿಂದ ಹೇಳಿಕೆಯ ಪರಿಣಾಮವೇನೂ ಸಿಗುವುದಿಲ್ಲ. ದೇಹದ ಅಗತ್ಯಕ್ಕೆ ತಕ್ಕಂತೆ ಜಿಮ್‌ನಲ್ಲಿ ತೊಡಗಿಸಿಕೊಂಡರೆ ಉತ್ತಮ. ಇಲ್ಲವಾದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

ಇಂಥವರು ಜಿಮ್ ಮಾಡಲೇ ಬಾರದು.
ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವರು ಯಾರೇ ಆದರೂ ಜಿಮ್‌ ಮಾಡಬಹುದು. ಆದರೆ ಗರ್ಭಿಣಿಯರು, ಬೆನ್ನು ನೋವು, ಹಾಗೂ ಶಾರೀರಿಕ ನೋವಿನಿಂದ ಬಳಲುತ್ತಿರುವರು ಜಿಮ್‌ ಮಾಡಬಾರದು. ಅತಿಯಾದ ದೇಹ ತೂಕ ಹೊಂದಿರುವವರು ಜಿಮ್‌ನ ಮೊರೆ ಹೋಗಬಹುದು. ಆದರೆ ಜಿಮ್‌ಗೆ ತೆರಳುವ ಮುನ್ನ ಈ ಬಗ್ಗೆ ಅನುಭವವುಳ್ಳವರನ್ನು ವಿಚಾರಿಸಿ ಬಳಿಕ ತಮ್ಮ ದೇಹಕ್ಕೆ ಜಿಮ್‌ ಅಭ್ಯಾಸ ಒಗ್ಗುವಂತಿದ್ದರೆ ಜಿಮ್ ನಲ್ಲಿ ಕಸರತ್ತು ಮುಂದುವರೆಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top