fbpx
ಸಮಾಚಾರ

“ನೀವು ಮಾಡಿರೋ ಪಾಪ ಎಲ್ಲಿ ಹೋದ್ರೂ ಕಳೆಯಲ್ಲ” ಮಕ್ಕಾ ಯಾತ್ರೆಗಾಗಿ ಅನುಮತಿ ಕೇಳಿದ ನಲಪಾಡ್‌ಗೆ ಹೈಕೋರ್ಟ್‌ ಚಾಟಿ.

ಉದ್ಯಮಿಯೊಬ್ಬರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ ಜಾಮೀನು ಪಡೆದಿರುವ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌, ಮೆಕ್ಕಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ನೀವು ಮಾಡಿದ ಪಾಪ ಎಲ್ಲಿಗೇ ಹೋದರೂ ಕಳೆಯಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಆರೋಪಿ ಮೊಹಮ್ಮದ್ ನಲಪಾಡ್ ಗೆ ಮಕ್ಕಾಗೆ ತೆರಳಲು ಅನುಮತಿ ನಿರಾಕರಿಸಿದೆ. ಮೆಕ್ಕಾ ಯಾತ್ರೆಗೆ ತೆರಳಲು ಜಾಮೀನು ಷರತ್ತು ಸಡಿಲಿಕೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮೇ 14ಕ್ಕೆ ಮುಂದೂಡಿದೆ.

ನಲಪಾಡ್ ಪರ ವಕೀಲರು ನ್ಯಾಯಲಯಕ್ಕೆ ಹಾಜರಾಗಿ “ತಮ್ಮ ಕಕ್ಷಿದಾರರು ಇಪ್ಪತ್ತು ದಿನಗಳ ಕಾಲ ಮಕ್ಕಾಗೆ ತೆರಳುವವರಿದ್ದಾರೆ. ಹಾಗಾಗಿ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಬೇಕು” ಎಂದು ಮನವಿ ಮಾಡಿದ್ದರು.ಆಗ ನಲಪಾಡ್ ವಿರುದ್ಧ ಯಾವ ಆರೋಪವಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ವಕೀಲರು ಸೆಕ್ಷನ್ 307(ಕೊಲೆ ಯತ್ನ) ಆರೋಪವಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಾಲಯ “ನೀವು ಮಾಡಿದ ಪಾಪ ಎಲ್ಲಿಗೇ ಹೋದರೂ ತೂಳೆದು ಹೋಗಲ್ಲ ಬಿಡಿ” ಎಂದು ಚಾಟಿ ಬೀಸಿದ್ದಾರೆ. ”ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಇಲ್ಲವೆಂದು ಹೇಳಲಿ ನಂತರ ಪರಿಶೀಲಿಸಲಾಗುವುದು”ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top