fbpx
ಸಮಾಚಾರ

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿರಬೇಕೆಂದರೆ ಕಬ್ಬಿನ ಹಾಲನ್ನು ಸೇವಿಸುತ್ತಲಿರಿ.

ಸಾಮಾನ್ಯವಾಗಿ ಆರೋಗ್ಯಕರ ಕಬ್ಬಿನ ಹಾಲಿನಲ್ಲಿ ೧೫ % ನೈಸರ್ಗಿಕ ಸಕ್ಕರೆಯ ಅಂಶವಿರುತ್ತದೆ.

ಬೆಸಿಗೆಯ ಸಮಯದಲ್ಲಿ ದೇಹದ ನಿರ್ಜಲೀಕರಣವನ್ನು ತಡೆಗಟ್ಟಲು ಕಬ್ಬಿನ ಹಾಲು ಉಪಯುಕ್ತ ಪಾನೀಯ.

ಬಿಳಿ ನೊರೆಯ ಜೊತೆಗೆ ಸಿಹಿ ಸಿಹಿಯಾಗಿರುವ ಕಬ್ಬಿನ ರಸ ದೈಹಿಕವಾಗಿ ಶಕ್ತಿದಾಯಕ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಉತ್ತಮ.

ಕಬ್ಬಿನ ಹಾಲು ಸೇವನೆಯಿಂದ ದೈಹಿಕ ಆರೋಗ್ಯದ ಮೇಲಾಗುವ ಪರಿಣಾಮ.

ಕಬ್ಬಿನ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆಯ ಅಂಶ ದೇಹದಲ್ಲಿರುವ ಕೊಬ್ಬಿನಂಶವನ್ನು ಕರಗಿಸುವ ಮೂಲಕ ತೂಕ ಕಡಿಮೆ ಮಾಡುವುದರಲ್ಲಿ ಸಹಕಾರಿಯಾಗಿದೆ.

ಕಬ್ಬಿನ ಹಾಲಿನ ಸೇವನೆಯಿಂದ ಮೂತ್ರ ಪಿಂಡದಲ್ಲಿ ಕಲ್ಲಿದ್ದರೆ ನಿವಾರಣೆಯಾಗುತ್ತವೆ.

ಜೊತೆಗೆ ನೀವು ಮೂತ್ರ ವಿಸರ್ಜಿಸುವ ಮಾರ್ಗದಲ್ಲಿ ಸೋಂಕಾಗಿದ್ದರೆ ಕಬ್ಬಿನ ರಸ ಆ ಸೋಂಕನ್ನು ನಿವಾರಿಸುತ್ತದೆ.

ಕಬ್ಬಿನ ರಸದ ಸೇವನೆಯಿಂದಾಗಿ ಬಾಣಂತಿಯರ ಎದೆಹಾಲು ಹೆಚ್ಚುವುದರ ಜೊತೆಗೆ ಆರೋಗ್ಯಕರವಾಗಿರುತ್ತದೆ.

ನೀವು ತುಂಬಾ ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದರೆ ಒಂದು ಲೀಟರ್ ನಷ್ಟು‌ ಕಬ್ಬಿನ ರಸಕ್ಕೆ 250 ಗ್ರಾಂ ಹಸುವಿನ ತುಪ್ಪ ಸೇರಿಸಿ ಕೇವಲ ತುಪ್ಪ ಉಳಿಯುವ ಹಾಗೆ ಚೆನ್ನಾಗಿ ಕುದಿಸಿ. ಬೆಳಗ್ಗೆ ರಾತ್ರಿ ಆ ತುಪ್ಪವನ್ನು 1 ಚಮಚ ಸೇವಿಸಿದರೆ ಕೆಮ್ಮು ಬೇಗ ಗುಣವಾಗುತ್ತದೆ. ಚೆನ್ನಾಗಿ ಕುದಿಸಿ ನಿಯಮಿತವಾಗಿ ಕುಡಿದರೆ ಜೀರ್ಣಶಕ್ತಿಯೂ ಹೆಚ್ಚುತ್ತದೆ.

ನೀವು ಕಬ್ಬಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ಮಲೇರಿಯಾದಲ್ಲಿ ಬರುವ ವಾಂತಿ ಕಡಿಮೆಯಾಗುತ್ತದೆ.

ಒಂದು ವೇಳೆ ನಿಮಗೆ ಒಣ ಕೆಮ್ಮಿದ್ದರೆ ದಿನಕ್ಕೆ 2 ಬಾರಿ ಕಬ್ಬಿನ ರಸ ಸೇವಿಸುವುದರಿಂದ ಬೇಗ ಗುಣಮುಖರಾಗುತ್ತೀರಿ.

ಮಾನಸಿಕ ಆರೋಗ್ಯಕ್ಕೆ ಇದರಲ್ಲಿರುವ ಅಮಿನೊ ಆ್ಯಸಿಡ್ಸ್. ದೇಹದಲ್ಲಿ‌ ಒತ್ತಡ ಉಂಟು ಮಾಡುವ ಹಾರ್ಮೋನ್‌ಗಳ ಮಟ್ಟವನ್ನು ಸರಿದೂಗಿಸುತ್ತದೆ‌. ಇದರ ಸೇವೆನೆಯಿಂದಾಗಿ ಚೆನ್ನಾಗಿ ನಿದ್ದೆ ಬಂದು ಮಾನಸಿಕ ಒತ್ತಡ ಶಮನಗೊಳ್ಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top