fbpx
ಸಮಾಚಾರ

ಕತ್ತೆಗೂ ಒಂದು ಕಾಲ! ಭಾರತದ ಸೂಪರ್ ಸ್ಟಾರ್ ಕತ್ತೆಯ ಬಗ್ಗೆ ನಿಮಗೆಷ್ಟು ಗೊತ್ತು.

ನಮ್ಮಲ್ಲಿ ಕತ್ತೆಗಳನ್ನ ಸಾಮಾನ್ಯವಾಗಿ ಮೂಟೆ ಹೊರಲುಬಳಸಿಕೊಳ್ಳಲಾಗುತ್ತೆ. ಅದನ್ನ ಬಿಟ್ಟರೆ ಇತ್ತೀಚೆಗೆ ಕತ್ತೆಯ ಹಾಲಿನ ಮಾರಾಟ ಕೂಡ ಹೆಚ್ಚಾಗುತ್ತಿದೆ. ಹೆಚ್ಚೇನೂ ಉಪಯೋಗಕ್ಕೆ ಬಾರದ ಬರೀಯ ಭಾರದ ವಸ್ತುಗಳ ಸಾಗಾಣಿಕೆಯಲ್ಲಿ ಸಹಾಯಕವಾಗುವ ಕತ್ತೆಗಳಿಗೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 2-3 ಲಕ್ಷ ಬೆಲೆ ಇದೆ ಅಂದರೆ ನೀವೂ ನಂಬಲೇಬೇಕು, ಅದರಲ್ಲೂ ಭಾರತದಲ್ಲಿರೋ ಒಂದು ಸೆಲೆಬ್ರೆಟಿ ಕತ್ತೆ ಬರೋಬ್ಬರಿ 10 ಲಕ್ಷ ರೂಪಾಯಿಗೆ ಬೆಲೆ ಬಾಳುತ್ತದೆ ಅಂದರೆ ನೀವು ನಿಜಕ್ಕೂ ಹುಬ್ಬೇರಿಸುತ್ತೀರಿ.

ಹೌದು. ಹರಿಯಾಣದಲ್ಲಿರೋ ಟಿಪ್ಪು ಎಂಬ ಹೆಸರಿನ ಕತ್ತೆಯ ಬೆಲೆ 10 ಲಕ್ಷ. ಕತ್ತೆಗಳ ವ್ಯಾಪಾರಿಯಾಗಿರುವ ರಾಜು ಎಂಬಾತ ಈ ಸೆಲೆಬ್ರೆಟಿ ಕತ್ತೆಯನ್ನು ಸಾಕುತ್ತಿದ್ದಾರೆ. ಈ ಕತ್ತೆಗೆ ಇಷ್ಟೊಂದು ಬೆಲೆ ಇರೋದಕ್ಕೆ ಕಾರಣ ಇದರ ಅಪ್ಪ-ಅಮ್ಮ. ಟಿಪ್ಪುನ ಮಾಲೀಕರಾಗಿರುವ ರಾಜು ಅವರ ತಂದೆ ಒಂದೊಮ್ಮೆ ಇಟಲಿಯಿಂದ ಗಂಡು ಕತ್ತೆಯೊಂದನ್ನ ತಂದು ಅಮೃತಸರದ ಹೆಣ್ಣು ಕತ್ತೆಗೆ ಜೋಡಿಯಾಗಿಸಿದ್ದರು. ಈ ಎರಡು ಕತ್ತೆಗಳ ಮರಿಯೇ ಟಿಪ್ಪು.

ಈ ಟಿಪ್ಪು ಇತರೆ ಸಾಮಾನ್ಯ ಕತ್ತೆಗಳಿಗಿಂತ 7 ಇಂಚು ಎತ್ತರವಿದ್ದು. ಸಿಕ್ಕಾಪಟ್ಟೆ ಹಠಮಾರಿಯೂ ಹೌದು. ಅಪರಿಚಿತರು ಹತ್ತಿರಕ್ಕೆ ಸುಳಿದರೂ ಒದೆಯಲು ಕಾಲೆತ್ತುವ ಜಾಯಮಾನ ಟಿಪ್ಪವಿನದ್ದು, ಹೀಗಾಗಿ ಇದನ್ನ ಮಾರಾಟ ಮಾಡಲಿಕ್ಕೆ ಇದರ ಮಾಲೀಕ ಮನಸ್ಸು ಮಾಡ್ತಿಲ್ಲ. ಕಡಲೆಕಾಳು, ಬೆಲ್ಲ ಹಾಗೂ ಹೊಟ್ಟು ಮಿಶ್ರಣದ ಆಹಾರ ಸವಿಯುವ ಮೂಲಕ ಐಶಾರಾಮಿಯಾಗಿ ಕತ್ತೆಗಳ ಗುಂಪಿನಲ್ಲಿ ಸದ್ಯಕ್ಕೆ ಟಿಪ್ಪು ರಾಜನಂತಿದ್ದಾನೆ

ಟಿಪ್ಪು, ಮಾರ್ಟಿನಾ ಫ್ರಾಂಕಾ ಎಂಬ ಬ್ರೀಡ್ಗೆ ಸೇರಿದ್ದು. ಈ ಜಾತಿಯ ಕತ್ತೆಗಳು ಹಾಲು ಉತ್ಪಾದನೆಗೆ ಜನಪ್ರೀಯಗೊಂಡಿವೆ. ಕತ್ತೆಗಳಿಗೆ ಕಸಿ ಮಾಡುವಾಗ ಈ ತಳಿಯ ಕತ್ತೆಗಳನ್ನೇ ಹೆಚ್ಚು ಬಳಸಲಾಗುತ್ತದೆ. ಸದ್ಯ ಟಿಪ್ಪುವನ್ನ ಕೂಡ ಹೇಸರಗತ್ತೆಗಳ ಕಸಿಗೆ ಬಳಸಿಕೊಳ್ಳಲಾಗುತ್ತಿದ್ದು. ಇದಕ್ಕಾಗಿ ಟಿಪ್ಪುಗೆ ಒಂದು ಬಾರಿಗೆ 40 ಸಾವಿರ ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಕಳೆದ ಎರಡೇ ವರ್ಷಗಳಲ್ಲಿ 50 ಹೇಸರಗತ್ತೆಗಳ ಜನ್ಮಕ್ಕೆ ಕಾರಣವಾಗಿರುವ ಟಿಪ್ಪು ತನ್ನ ಮಾಲೀಕನಿಗೆ 20 ಲಕ್ಷ ರೂಪಾಯಿ ಹಣವನ್ನ ಸಂಪಾದಿಸಿ ಕೊಟ್ಟಿದ್ದಾನೆ. ಕತ್ತೆಗಳನ್ನು ಸೋಮಾರಿಗಳು ಎನ್ನುವವರು ಒಮ್ಮೆ ಯೋಚಿಸಿ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top