fbpx
ಸಮಾಚಾರ

ಊಟದ ನಂತರ ಪಾನ್ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಭಾರತೀಯರ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿರುವ ಪಾನ್‌ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳೂ ಇವೆ. ಊಟದ ನಂತರ ಎಲೆಯಡಿಕೆ ಅಥವಾ ಪಾನ್‌ ತಿನ್ನುವುದು ಹಲವೆಡೆಗಳಲ್ಲಿ ವಾಡಿಕೆ. ಈ ರಸವತ್ತಾದ ಪಾನ್ ಗಳಲ್ಲಿ ಹಲವಾರು ವೆರೈಟಿಗಳೂ ಇವೆ. ಇಂಥ ರಸಭರಿತ ಪಾನ್, ‌ಜಗಿಯುವಾಗ ಖುಷಿ ಕೊಡುವುದರ ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡುತ್ತದೆ ಎಂದರೆ ನಂಬಲೇಬೇಕು.

ಕೆಮ್ಮು ನಿವಾರಕ: ಆ್ಯಂಟಿಬಯೋಟಿಕ್ಸ್‌ನ ಆಗರದಂತಿರುವ ವೀಳ್ಯದೆಲೆ ಸತತ ಕೆಮ್ಮು ಮತ್ತು ಅದರಿಂದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುವಲ್ಲಿ ಸಹಾಯಕಾರಿ.

ಮೊಡವೆಗಳ ನಿರ್ಣಾಮ: ಪಾನ್‌ನಲ್ಲಿ ಆ್ಯಂಟಿಮೈಕ್ರೊಬಲ್‌ ಅಂಶಗಳಿರುವುದರಿಂದ ಇದು ಮೊಡವೆಗಳನ್ನು ನಿವಾರಿಸಿ ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ ಅಲರ್ಜಿಯಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಅರಶಿನ ಪುಡಿ ಹಾಕಿ ಮುಖಕ್ಕೆ ಲೇಪಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

ಮಲಬದ್ಧತೆ ನಿವಾರಣೆ: ವೀಳ್ಯದೆಲೆಯಲ್ಲಿ ಅಧಿಕ ನಾರಿನಂಶ ಇರುವುದರಿಂದ. ಪಾನ್‌ ಸೇವನೆಯಿಂದಾಗಿ ಮಲಬದ್ಧತೆ ನಿವಾರಣೆಯಾಗುತ್ತದೆ. ಸ್ವಲ್ಪ ಬೆಚ್ಚನೆಯ ನೀರಿನ ಜೊತೆಗೆ ವೀಳ್ಯದೆಲೆಯನ್ನು ತಿಂದರೆ ದೇಹದಲ್ಲಿರುವ ಕಲ್ಮಶಗಳೆಲ್ಲಾ ಹೋಗುತ್ತವೆ.

ನೋವು ನಿವಾರಕ: ವೀಳ್ಯದೆಲೆಯಲ್ಲಿ ನೋವನ್ನು ನಿವಾರಿಸುವ ಔಷಧದ ಗುಣಗಳಿದ್ದು, ಈ ಎಲೆಯನ್ನು ಜಜ್ಜಿ ಗಾಯಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಬರಿ ಬಾಯಿಯಲ್ಲಿ ಜಗಿಯುವುದರಿಂದ ಹೊಟ್ಟೆ ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.

ಚುರುಕುತನ ಹೆಚ್ಚಳ: ಯಾವುದರಲ್ಲೂ ಆಸಕ್ತಿಯಿರದೆ ಒಂದು ರೀತಿಯ ಮಂಕುತನ ಕಾಡುತ್ತಿದ್ದರೆ ವೀಳ್ಯದೆಲೆ ತಿನ್ನಿ. ಇದು ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಒಂದು ಟೀ ಸ್ಪೂನ್‌ ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top