fbpx
ಸಮಾಚಾರ

ಬೆಳ್ಳೆತೆರೆ ಮೇಲೆ ಮೂಡಿಬರಲಿದೆ ಅಬ್ದುಲ್ ಕಲಾಂ ಜೀವನ ಚರಿತ್ರೆ.

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ..ಮನಮೋಹನ್ ಸಿಂಗ್, ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಸಂಜಯ್ ದತ್ ಯವರೆಗೂ ಬಯೋಪಿಕ್ ಚಿತ್ರಗಳು ಬಂದಿವೆ ಇದೀಗ ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಇಂಡಿಯಾ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಕೂಡ ಬೆಳ್ಳಿ ತೆರೆ ಮೇಲೆ ಮೂಡಿಬರಲು ಸಜ್ಜಾಗುತ್ತಿದೆ.

ಅಭಿಷೇಕ್ ಅಗರ್ವಾಲ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಮಾಡುವುದನ್ನು ಅಧಿಕೃತವಾಗಿ ಘೋಷಿಸಿರುವ ಅಭಿಷೇಕ್ ತಾರಾಗಣ ಮತ್ತು ತಾಂತ್ರಿಕ ಬಳಗವನ್ನು ಶೀಘ್ರದಲ್ಲೇ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.. ಅಬ್ದುಲ್ ಕಲಾಂ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಕುತೂಹಲಕ್ಕೂ ಸದ್ಯದಲ್ಲೇ ತೆರೆ ಬೀಳಲಿದೆ.

ಸಿನಿಮಾ ಮಾಡುವುದು ಪಕ್ಕಾ ಆಗಿದ್ದು, ಕಲಾಂ ಕುಟುಂಬದಿಂದ ಅನುಮತಿ ಪಡೆಯಬೇಕಾಗಿದೆಯಂತೆ. ”ಕಲಾಂ ಇಡೀ ಭಾರತದ ಹೀರೋ. ಅವರು ಎಷ್ಟೋ ಯುವಕರಿಗೆ ಸ್ಫೂರ್ತಿ ನೀಡುತ್ತಾರೆ.” ಎಂದಿರುವ ಅಭಿಷೇಕ್ ಅಗರ್ವಾಲ್ ಅದೇ ಕಾರಣಕ್ಕೆ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಚಿತ್ರ ಇನ್ನೆರಡು ತಿಂಗಳಲ್ಲಿ ಸೆಟ್ಟೇರಲಿದೆಯಂತೆ,.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top