fbpx
ಸಮಾಚಾರ

ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಮ್ಮೆ ಬ್ಯಾಡ್ ನ್ಯೂಸ್ ನೀಡಿದ ಎಬಿಡಿ ವಿಲಿಯರ್ಸ್.

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ ಎಬಿ ಡಿ ವಿಲಿಯರ್ ಕಳೆದ ವರ್ಷ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಹಾಗಿದ್ದರೂ ಐಪಿಎಲ್, ಪಿಎಸ್ಎಲ್ ಸೇರಿ ಕೆಲವು ದೇಶೀ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಇಂಥಾ ಎಬಿಡಿ ಇದೀಗ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದನ್ನು ನೀಡಿದ್ದಾರೆ.

ಆಸ್ಟ್ರೇಲಿಯಾದ ಜನಪ್ರಿಯ ಬಿಗ್‌ಬ್ಯಾಶ್‌ ಟೂರ್ನಿಯ ಅಂತಿಮ ಹಂತದಲ್ಲಿ ಆಡುವುದಾಗಿ ಡಿವಿಲಿಯರ್ಸ್ ಆಯೋಜಕರಿಗೆ ಈ ಮೊದಲು ತಿಳಿಸಿದ್ದರು. ಆದರೆ, ಬಿಗ್‌ಬ್ಯಾಶ್‌ ಲೀಗ್ ಟಿ20 ಟೂರ್ನಿಯಿಂದ ಹಿಂದೆ ಸರಿಯಲು ಮಿಸ್ಟರ್ 360 ನಿರ್ಧರಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್ ಮಾದರಿಯಲ್ಲಿ 14 ಪಂದ್ಯಗಳ ಲೀಗ್ ಹಂತ ನಡೆಸಲು ನಿರ್ಧರಿಸಿರುವ ಕಾರಣ ಟೂರ್ನಿಯಲ್ಲಿ ಆಡದಿರಲು ಡಿವಿಲಿಯರ್ಸ್ ತೀರ್ಮಾನಿಸಿದ್ದಾರೆ.. ಐಪಿಎಲ್ ನಂತರ ಬಿಗ್ ಬ್ಯಾಷ್ ಲೀಗ್ ನಲ್ಲಿ ನೆಚ್ಚಿನ ಆಟಗಾರನ ಬ್ಯಾಟಿಂಗ್ ನೋಡಲು ಆಸೆ ಪಟ್ಟಿದ್ದ ಅಭಿಮಾನಿಗಳು ಎಬಿಡಿಯ ನಿರ್ಧಾರದಿಂದ ನಿರಾಸೆಗೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಬಿಗ್ ಬ್ಯಾಶ್ ಲೀಗ್ ಈ ವೇಳೆಯೇ ಬರುವುದರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನ ಬಹಳಷ್ಟು ಸ್ಟಾರ್ ಆಟಗಾರರು ಟೂರ್ನಿಗೆ ಗೈರಾಗಲಿದ್ದಾರೆ.. ಇನ್ನು ಈಗ ಎಬಿಡಿ ಕೂಡ ಬಿಗ್ ಬ್ಯಾಷ್ ಲೀಗ್ ಗೆ ನೋ ಎಂದಿರುವುದು ಟೂರ್ನಿಯನ್ನು ಕಳೆಯನ್ನು ಇನ್ನಷ್ಟು ಕುಂದಿಸಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top