fbpx
ಸಮಾಚಾರ

“ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ” ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ.

“ಭಾರತಕ್ಕೆ ಸ್ವತಂತ್ರ ದೊರೆತ ನಂತರ ದೇಶದಲ್ಲಿ ಮೊದಲು ಹುಟ್ಟಿಕೊಂಡಿದ್ದು ಹಿಂದೂ ಭಯೋತ್ಪಾದನೆ” ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಂಎನ್ಎಂ(ಮಕ್ಕಳ ನೀದಿ ಮಯ್ಯಮ್) ಪಕ್ಷದ ಸಂಸ್ಥಾಪಕನಾಗಿರುವ ಕಮಲ್ ಹಾಸನ್ “ದೇಶದಲ್ಲಿ ಮುಸ್ಲಿಂ ಸಮುದಾಯದವರನ್ನು ತುಳಿಯಲಾಗುತ್ತಿದೆ ಹೀಗಾಗಿ ಅವರು ಹಿಂದೂಗಳು ಭಯೋತ್ಪಾದಕರು ಎಂದು ಹೇಳುತ್ತಿಲ್ಲ.. ಹಾಗೆ ನೋಡಿದರೆ ಭಾರತ ಸ್ವತಂತ್ರ ಪಡೆದ ನಂತರ ದೇಶದಲ್ಲಿ ಹುಟ್ಟಿಕೊಂಡಿದ್ದು ಹಿಂದೂ ಭಯೋತ್ಪಾದನೆ ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶದ ಮೊದಲ ಹಿಂದೂ ಭಯೋತ್ಪಾದಕ” ಎಂದು ಹೇಳಿದ್ದಾರೆ.

ಮಹಾತ್ಮ ಗಾಂಧಿಯ ಅತ್ಯತ್ತಮ ಮೊಮ್ಮಕ್ಕಳಲ್ಲಿ ನಾನು ಕೂಡ ಒಬ್ಬ, ಹೀಗಾಗಿ ನಾನು ಮಹಾತ್ಮನ ಹತ್ಯೆಗೆ ನ್ಯಾಯ ಕೇಳುತ್ತಿದ್ದೇನೆ. ನನ್ನ ಹೃದಯವನ್ನು ಮುಟ್ಟಿ ಹೇಳುತ್ತೇನೆ ನಾನು ನಿಜವಾದ ಭಾರತೀಯ. ನಿಜವಾದ ಭಾರತೀಯನಿಗೆ ದೇಶದಲ್ಲಿ ಎಲ್ಲರೂ ಶಾಂತಿ ಮತ್ತು ಸಮಾನರಾಗಿರಬೇಕು ಎಂದು ಇಚ್ಛಿಸುತ್ತಾನೆ.. ನಮ್ಮ ರಾಷ್ಟ್ರೀಯ ಧ್ವಜದ ತ್ರಿವರ್ಣ ಬಣ್ಣವನ್ನು ಯಾವಾಗಲೂ ಒಂದೇ ರೀತಿ ಉಳಿಸಿಕೊಳ್ಳಲು ಬಯಸುತ್ತಾರೆ” ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಹೇಳಿಕೆ ನೀಡಿರುವುದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top