fbpx
ಸಮಾಚಾರ

ಶುರುವಾಯ್ತು ‘ಕೆಜಿಎಫ್​ ಚಾಪ್ಟರ್ 2’ ಸಿನಿಮಾ ಶೂಟಿಂಗ್

ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ 2 ಚಿತ್ರೀಕರಣ ಆರಂಭವಾಗಿದೆ. ಡೈರೆಕ್ಟರ್ ಪ್ರಶಾಂತ್ ನೀಲ್‌ ಟೀಮ್‌ ಬೆಂಗಳೂರು ಭಾಗದಲ್ಲಿ ಶೂಟಿಂಗ್ ಶುರು ಮಾಡಿದೆ. ಚಿತ್ರದ ಸೆಟ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಸಿನಿಮಾಟೋಗ್ರಾಫರ್ ಭುವನ್ ಗೌಡ ಸೇರಿದಂತೆ ತಂತ್ರಜ್ಞರು ಇದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಮಲ್ಪೆ, ಮಂಗಳೂರು, ಉಡುಪಿ ಸೇರಿದಂತೆ ಬಹುತೇಕ ಕರಾವಳಿ ಭಾಗಗಳಲ್ಲಿ ಶೂಟಿಂಗ್ ನಡೆಸಲಿದೆ.

ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ, ಚಂದ್ರಮೌಳಿ, ಕೆ.ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಇನ್ನು ಭಾಗ 2ರಲ್ಲಿ ಹಲವಾರು ಹೊಸ ಮುಖಗಳು ಕಾಣಿಸಲಿವೆ. ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂಬ ಸೂಚನೆಯೂ ಸಿಕ್ಕಿದೆ.. ಅಂದಹಾಗೆ ಸಿನಿಮಾಟೋಗ್ರಾಫರ್ ಭುವನ್ ಗೌಡ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರೀಕರಣಕ್ಕೆ ಹಾಜರಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top