fbpx
ಸಮಾಚಾರ

ಬೇಸಿಗೆಗೆ ಹೇಳಿಮಾಡಿಸಿದ ಪ್ರವಾಸ ತಾಣ ಕುಲು ಮನಾಲಿ

ಕುಲು ಮನಾಲಿ

ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಒಂದು ಸುಂದರ ಗಿರಿಧಾಮ.೧೯೯೦ ಮೀ ಎತ್ತರದಲ್ಲಿರುವ ‘ಮನಾಲಿ’ಯು, ಕುಲು ಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ ‘ಬೆಳ್ಳಿಯ ಕಣಿವೆ’ಗಳು ಎಂಬ ಹೆಸರು ಬಂದಿದೆ.

 

 

ಬೇಸಗೆಯಲ್ಲೂ ಹಿತವಾದ ಹಾಗೂ ಆಹ್ಲಾದಕರವೆನಿಸುವ ಈ ಪ್ರದೇಶದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೩೦೦೦೦. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. ‘ಮನು ಸ್ಮೃತಿ’ಯನ್ನು ರಚಿಸಿದ ‘ಮನು ನಿಲಯ’ವೇ ಕಾಲಕ್ರಮೇಣ ‘ಮನಾಲಿ’ ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು ‘ದೇವರ ಕಣಿವೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

 

ಹಿಮ ಮತ್ತು ತಣ್ಣನೆ ಗಾಳಿಯಿಂದ ಬಿಸಿಲಿನ ತಾಪವನ್ನು ಸದೆಬಡಿಯಲು ಕುಲು ಮನಾಲಿಗೆ ಬನ್ನಿ. ಹಿಮ ಮುಸುಕಿದ ಪರ್ವತ ಶ್ರೇಣಿಗಳಿಂದ ತುಂಬಿದ ಮತ್ತು ಮೋಜಿನ ಮನೆಯಾದ ಕುಲು ಮನಾಲಿ ಭಾರತದ ಒಂದು ಪ್ರಸಿದ್ಧ ಬೇಸಿಗೆ ರಜೆಗಳ ಪ್ರವಾಸ ಸ್ಥಳ.

 

 

ಇದರ ಹತ್ತಿರದ ರೈಲ್ವೆ ಸ್ಟೇಷನ್ ಜೋಗಿಂದರ್ ನಗರ್, ಇದು ಚಂಡಿಘರ್ ಮೂಲಕ ಭಾರತದ ಬೇರೆ ಬೇರೆ ನಗರಗಳಿಗೆ ಸಂಪರ್ಕಿಸುತ್ತದೆ. ಅದ್ಭುತ ದೇವಾಲಯಗಳಿಂದ ತುಂಬಿದ ಈ ತಾಣದಲ್ಲಿ ಭಗವಾನ್ ಶಿವನ ಮಹಾದೇವ ಮಂದಿರ ಪ್ರವಾಸಿಗರನ್ನು ಬಹಳ ಆಕರ್ಷಿಸುತ್ತದೆ. ಅಷ್ಟೇ ಅಸಾಧಾರಣವಾದ ಭುವನೇಶ್ವರಿ ಮತ್ತು ಮನು ರಿಷಿ ಮಂದಿರಗಳು ಇಲ್ಲಿವೆ.

 

 

ಮಂದಿರಗಳಷ್ಟೇ ಅಲ್ಲ, ಪ್ರವಾಸಿಗರನ್ನು ಮೋಹಕಗೊಳಿಸಲು ಕಲಾ ಸಂಗ್ರಹಾಲಯಗಳು ಇಲ್ಲಿವೆ. ಉದಾಹರಣೆಗೆ ರಶಿಯನ್ ಕಲೆಗಾರ ರೋರಿಕ್ ಅವರ ಕಲಾಕೃತಿಗಳನ್ನು ತೋರಿಸುವ ‘ರೋರಿಕ್ ಆರ್ಟ್ ಗ್ಯಾಲರಿ’. ಕುಲ್ಲುನ ಪ್ರಸಿದ್ಧ ಆಹಾರ, ವಿಶೇಷವಾಗಿ ಸಿಹಿ ಅನ್ನ, ಪಲ್ಯ ಮತ್ತು ಮೊಸರಿನ ಆನಂದ ಪಡೆಯಿರಿ.

 

 

ಇಲ್ಲಿನ ರಹಲ ಫಾಲ್ಸ್ ಮತ್ತು ಪಲನಿ ಫಾಲ್ಸ್ ನೋಡಿ ನೀವು ಖಂಡಿತವಾಗಿ ಮಂತ್ರ ಮುಗ್ಧರಾಗುವಿರಿ. ಬಿಳಿ ನೀರಿನ ರಾಫ್ಟಿಂಗ್, ಕ್ಯಾನೋಯಿಂಗ್‌ ಮತ್ತು ಬೀಯಸ್ (ವ್ಯಾಸ) ನದಿಯ ಕಯಾಕಿಂಗ್ ಅನುಭವ ಪಡೆಯಿರಿ. ಸೋಲೊಂಗ್ ನಾಲೆ, ಪತಲ್ಸು ಪೀಕ್, ಕೋಥಿ, ಮರ್ಹಿ ಮತ್ತು  ರೋಹ್ತಂಗ್ ಪಾಸು ಎಂಬ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಿ. ಪ್ಯಾರ ಗ್ಲೈಡಿಂಗ್ ಮತ್ತು ಟ್ರೆಕಿಂಗ್ ಗೆ ಅನುಕೂಲವಾದ ತಾಣವಿದು.  ಇನ್ಯಾಕೆ ತಡ? ಬೇಗನೆ ಹೊರಡಿ ಚುಮುಚುಮು ಚಳಿಯ ಕುಲು ಮನಾಲಿಗೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top