fbpx
ಸಮಾಚಾರ

ಸಿನಿಮಾ ಆಗಲಿದೆ ‘ನಿಖಿಲ್ ಎಲ್ಲಿದಿಯಪ್ಪಾ’ ಡೈಲಾಗ್. ಹೀರೋ ಯಾರು ಗೊತ್ತಾ?

‘ನಿಖಿಲ್ ಎಲ್ಲಿದಿಯಪ್ಪಾ’ ಹೀಗೊಂದು ಡೈಲಾಗ್ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ವೈರಲ್ ಆಗಿದ್ದು ಹಳೆಯ ವಿಚಾರ. ಇದೇ ಡೈಲಾಗ್ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಪುತ್ನ ರತ್ನ ನಿಖಿಲ್ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲೂ ಸಕ್ರೀಯರಾಗಿದ್ದಾರೆ. ಇದುವೆರೆಗೆ ನಿಖಿಲ್ ನಾಯಕತ್ವದಲ್ಲಿ ಎರಡು ಚಿತ್ರಗಳು ಬಿಡುಗಡೆಗೊಂಡಿವೆ. ಆದರೆ ಎರಡೂ ಚಿತ್ರಗಳು ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲವಾದವೂ ಎಂಬುದು ವಾಸ್ತವದ ಸಂಗತಿ. ಈ ಹಿಂದೆ ನಿಖಿಲ್ ಸಿನಿಮಾಗಳಾಗಲಿ, ಅವರ ಸಂಭಾಷಣೆಗಳಾಗಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿ ಯಾವಾಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದರೋ ಅದರಲ್ಲೂ ನಿಖಿಲ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಗೆ ಎದುರಾಳಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಯಿತೋ ಅಂದಿನಿಂದ ನಿಖಿಲ್ ಸ್ಪರ್ಧೆಗೆ ಹಾಗೂ ಕುಮಾರಸ್ವಾಮಿಯವರ ನಿರೀಕ್ಷೆಗೆ ವ್ಯತಿರಿಕ್ತವಾಗಿಯೇ ಪ್ರತಿಕ್ರೀಯೆಗಳು ಬರಲು ಶುರುವಾದವು.

ಮೂರು ವರ್ಷಗಳ ಹಿಂದೆ ನಿಖಿಲ್ ನಟನೆಯ ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಂದೆ ಮಕ್ಕಳಿಬ್ಬರ ನಡುವಣ ನಡೆದ ನಾಟಕೀಯವೆನ್ನಿಸುವ ಸಂಭಾಷಣೆಯೊಂದರ ತುಣುಕೊಂದನ್ನು ಅಸ್ತ್ರವನ್ನಾಗಿಸಿಕೊಂಡ ನೆಟ್ಟಿಗರು ಸೋಷಿಯಲ್ ಮಿಡಿಯಾದಲ್ಲಿ ಗೌಡರ ಕುಟುಂಬದ ಬಗೆಗೆ ವ್ಯಂಗ್ಯವಾಡಲು ಶುರು ಮಾಡಿದರು. ಅದೇಷ್ಟರ ಮಟ್ಟಿಗೆ ಎಂದರೆ ಆ ಸಂಭಾಷಣೆಗಳು ವಿದೇಶಿಗರ ಬಾಯಲ್ಲೂ ಹರಿದಾಡಿ ಟಾಪ್ ಟ್ರೆಂಡಿಗ್ ಪಟ್ಟಿ ಸೇರುವುದರ ಜೊತೆಗೆ ಗೌಡರ ಕುಟುಂಬದ ನಿದ್ದೆಗೆಡಿಸಿದ್ದು ಸುಳ್ಳಲ್ಲ

ಇದಿಷ್ಟು ಕತೆಯ ವೃತ್ತಾಂತವಾದರೆ, ಅದೇ ಸಂಭಾಷಣೆಯನ್ನಿಟ್ಟುಕೊಂಡು ಸಿನಿಮಾ ಮಾಡುವ ಹಂಬಲದಿಂದ ಕನ್ನಡದ ಹಲವು ನಿರ್ಮಾಪಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿ ವಿಫಲ ಪ್ರಯತ್ನವನ್ನು ನಡೆಸಿದ್ದರು . ನಂತರ ವಾಣಿಜ್ಯ ಮಂಡಳಿ ಟೈಟಲ್ ನೋಂದಾಯಿಸಲು ಆಕ್ಷೇಪಣೆ ವ್ಯಕ್ತ ಪಡಿಸಿದ ನಂತರ ಎಲ್ಲವೂ ತಣ್ಣಗಾಗಿತ್ತು.

ಆದರೆ ಇದೀಗ ಅದೇ ‘ನಿಖಿಲ್ ಎಲ್ಲಿದಿಯಪ್ಪಾ’ ಟೈಟಲ್ ಇಟ್ಟುಕೊಂಡು ನಾವು ಸಿನಿಮಾ ಮಾಡ್ತೀವಿ, ನಿಖಿಲ್ ಅವರೇ ನಾಯಕ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಗೌಡರ ಕುಟುಂಬದ ಆಪ್ತರು ಹಾಗೂ ಸಚಿವರಾಗಿರುವ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ . ವೇದಿಕೆಯೊಂದರಲ್ಲಿ ‘ನಿಖಿಲ್ ಎಲ್ಲಿದಿಯಪ್ಪಾ’ ಡೈಲಾಗ್ ವೈರಲ್ ಆದ ಬಗೆಗೆ ಸ್ವತಃ ನಿಖಿಲ್ ಅವರೇ ಸ್ವಗತ ಶುರುಮಾಡಿದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಪುಟ್ಟರಾಜು ಈ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.[

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top