fbpx
ಸಮಾಚಾರ

ಹೆಣ್ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ ಕ್ಷಿಪಣಿ ಮಹಿಳೆ – ಮೊದಲ ಮಹಿಳಾ ವಿಜ್ಞಾನಿ ಟೆಸ್ಸಿ ಥಾಮಸ್ ರವರ ಕಥೆ

ಒಬ್ಬ ಮಹಿಳೆ ತನ್ನೆಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿ,ಎಲ್ಲಾ ಸವಾಲುಗಳನ್ನು ಎದುರಿಸಿ, ಯಶಸ್ವಿಯಾಗಿ ಭಾರತದ ಮೊಟ್ಟ ಮೊದಲ ಮಹಿಳಾ ವಿಜ್ಞಾನಿಯಾದರು.

ಭಾರತೀಯ ಮಹಿಳೆಯರು ಇಂದು ಎಲ್ಲಾ ಸಂಕೋಲೆಗಳನ್ನು ಹಿಮ್ಮೆಟ್ಟಿ ನಿಂತು ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ನಾವು ಯಾರಿಗಿಂತ ಏನು ಕಡಿಮೆಯಿಲ್ಲ ಎಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಅವರ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ  ಸಾಧಿಸಿ ತೋರಿಸಿದ್ದಾರೆ ಎಂದು ಹೇಳುವುದಕ್ಕೆ ಇದು ಕೂಡ  ಒಂದು ನೈಜ ಸಾಕ್ಷಿಯಾಗಿದೆ. ಶತ ಶತಮಾನಗಳಿಂದಲೂ ಗಂಡಸರಿಗೆ ಮಾತ್ರ  ದೊಡ್ಡ ದೊಡ್ಡ ಹುದ್ದೆಗಳು ಸೀಮಿತವಾಗಿವೇ ಎನ್ನುವ  ಧೋರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಮೊದಲು ಉನ್ನತ ಹುದ್ದೆಗಳನ್ನು ಗಂಡಸರಿಗೆ ಮಾತ್ರ ಕಾಯ್ದಿರಿಸಲಾಗುತ್ತಿತ್ತು.ಆದರೆ ಇಂದು ಮಹಿಳೆಯರು ನ್ಯಾಯ ಸಮ್ಮತವಾಗಿ ಪ್ರತೀ ಕ್ಷೇತ್ರಕ್ಕೂ ಲಗ್ಗೆ ಇಟ್ಟು ನಾವು ಎಲ್ಲಾ ಕೆಲಸಗಳನ್ನು ನಿಭಾಯಿಸಬಲ್ಲೆವೂ ನಮಗೂ ಆ ಸಾಮರ್ಥ್ಯ, ಯೋಗ್ಯತೆ ಇದೆ ಎನ್ನುವುದನ್ನು ಸಾಭೀತುಪಡಿಸಿದ್ದಾರೆ.

 

 

ಇಂದು ಮಹಿಳೆ  ಕೇವಲ ಭೂಮಿಯ ಮೇಲೆ ಮಾತ್ರ ಅವರೇನು ಎಂಬುದನ್ನು ತೋರಿಸದೇ ಅಂತರಿಕ್ಷದಲ್ಲಿಯೂ ನಾವು ಕಾರ್ಯ ನಿಭಾಯಿಸಬಲ್ಲೆವೂ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಉದಾಹರಣೆಗೆ, ದಿವಂಗತ ಕಲ್ಪನಾ . ಇವರಂತೆಯೇ ಇನ್ನೂ ಒಬ್ಬ ಮಹಿಳೆಯಿದ್ದಾರೆ  ತನ್ನ ಗೆಳೆಯರ ಜೊತೆ ನಿಂತು  ಎಲ್ಲವನ್ನೂ ಗಮನಾರ್ಹವಾಗಿ  ನಿರ್ವಹಿಸಿ ಅದ್ಭುತವಾದ ವ್ಯಕ್ತಿತ್ವವನ್ನು ಹೊಂದಿರುವ ಮಹಿಳೆ ಅವರೇ ಡಾಕ್ಟರ್ ಟೆಸ್ಸಿ ಥಾಮಸ್.

ಅವರು ತಮ್ಮ ಎಲ್ಲಾ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪೂರ್ಣಗೊಳಿಸಿದ್ದಾರೆ ಮೊದಲ ವಿಜ್ಞಾನಿಯಾಗಿ,ಗಂಡನಿಗೆ ತಕ್ಕ ಹೆಂಡತಿಯಾಗಿ ಮತ್ತು ಇನ್ನೂ ಮುಖ್ಯವಾಗಿ ಒಳ್ಳೆಯ ಮನುಷ್ಯತ್ವ ಹೊಂದಿರುವ ಮೂನುಷ್ಯರಾಗಿದ್ದಾರೆ.ಅವರು ಖಂಡಿತವಾಗಿಯೂ ಒಬ್ಬ ಸಂಪೂರ್ಣ ಮಹಿಳೆ.

ಡಾಕ್ಟರ್ ಟೆಸ್ಸಿ ಥಾಮಸ್ ರವರು ಈಗ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ  ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿದ್ದಾರೆ. (DRDO).ಇವರು ಮೊದಲ ಮಹಿಳಾ ಇಂಜಿನಿಯರ್ ಆಗಿ (ಅಗ್ನಿ-v) ಕ್ಷಿಪಣಿ ಯೋಜನೆಯ ಮುಖ್ಯಸ್ಥರಾದರು.

 

 

ಡಾಕ್ಟರ್ ಟೆಸ್ಸಿ ಥಾಮಸ್ ರವರು ಮೂಲತಃ ಅಲಪುಜ್ಹ ಜಿಲ್ಲೆಯ ಕೇರಳ ರಾಜ್ಯದವರು.ಇವರು ಇವರ ಬಾಲ್ಯದ ಜೀವನವನ್ನು ಅಂತರಿಕ್ಷಕ್ಕೆ ಉಡಾವಣೆಗೊಳ್ಳುವ  ರಾಕೆಟಗಳನ್ನು ನೋಡುತ್ತಾ ಕಾಲ ಕಳೆದರು. “ತುಂಬಾ”ದಿಂದ ಉಡಾವಣೆಗೊಳ್ಳುತ್ತಿದ್ದವು.ತುಂಬಾ ಕೇರಳದಲ್ಲಿ ಹಿಂದಿನ ದಿನಗಳಲ್ಲಿ ಇದು  ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿತ್ತು. ಯಾವಾಗ  ಟೆಸ್ಸಿಯವರಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಮೇಲಿರುವ ಮೋಹ,ಪ್ರೀತಿ  ಆಥವಾ  ಅಗಾಧವಾದ  ಜ್ಞಾನ  ಅರಿವಾಯಿತು.ತದ ನಂತರ    ( Defence institute of advance technologies) ಸುಧಾರಿತ ತಂತ್ರಜ್ಞಾನಗಳ ರಕ್ಷಣಾ ಸಂಸ್ಥೆ ,ಪುಣೆಯಲ್ಲಿ ಎಂ.ಟೆಕ್. ಅನ್ನು ಪೂರ್ಣಗೊಳಿಸಿ  ಮಾರ್ಗದರ್ಶಿ ಶಾಸ್ತಾಸ್ತ್ರಗಳ ಕೋರ್ಸ್ ಗೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ದಲ್ಲಿ ಸೇರಿಕೊಂಡರು. ಟೆಸ್ಸಿಯವರು  1988 ರಲ್ಲಿ ಮೊದಲ ಭಾರಿ ವಿಜ್ಞಾನಿಯಾಗಿ ನೇಮಕಗೊಂಡರು.

ಡಾಕ್ಟರ್ ಟೆಸ್ಸಿ ಅಗ್ನಿ -3  ಕ್ಷಿಪಣಿ ಯೋಜನೆಯ ಸಹಾಯಕ ನಿರ್ದೇಶಕರಾಗಿ ನಂತರ 2011 ರಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಗಾದ ಕ್ಷಿಪಣಿ ಅಗ್ನಿ-4 ಯೋಜನೆಯ ನಿರ್ದೇಶಕರಾಗಿದ್ದರು.ಅವರು  5000 ಕಿಲೋಮೀಟರ್ ವ್ಯಾಪ್ತಿಯ ಅಗ್ನಿ-v  ಇದರ ಯೋಜಿತ ನಿರ್ದೇಶಕರಾಗಿ ನೇಮಕಗೊಂಡರು ಮತ್ತೆ  ಇದನ್ನೂ ಕೂಡ ಯಶಸ್ವಿಯಾಗಿ  2012 ರಲ್ಲಿ ಮೊದಲನೇ ಬಾರಿಗೆ ಪರೀಕ್ಷೆಗೊಳಪಡಿಸಲಾಯಿತು.

ಅವರ ಪ್ರಮುಖ ಸಾಧನೆಗಳನ್ನು ಗಮನಿಸಿ  ಭಾರತದಲ್ಲಿನ ದಿವಗಂತ ಮಾಜಿ ರಾಷ್ಟ್ರಪತಿ  ಡಾಕ್ಟರ್ ಅಬ್ದುಲ್ ಕಲಾಂ ರವರು ಇವರನ್ನು  ಅಗ್ನಿ  ಕ್ಷಿಪಣಿ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿದ್ದರು.ಅದೇ ರೀತಿ ಇವರು ಹೆಮ್ಮೆಯಿಂದ ಲಾಲಾ ಬಹದ್ದೂರ್  ಶಾಸ್ತ್ರಿಯವರ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ  ಪಡೆದಿದ್ದಾರೆ ಮತ್ತು ಇವರು ಅನೇಕ ಶೀರ್ಷಿಕೆಗಳಿಂದ ಗೌರವಿಸಲ್ಪಟ್ಟರು ಅವು “ಅಗ್ನಿ ಪುತ್ರಿ” ಮತ್ತು “ಭಾರತದ ಕ್ಷಿಪಣಿ ಮಹಿಳೆ”.

ತನ್ನ ಸಾಧನೆಗಳು ,ದೊಡ್ಡ ದೊಡ್ಡ ಪ್ರಯತ್ನಗಳು ಅನೇಕ ನಿರ್ಣಯಗಳ, ಏಷ್ಟೋ ದಿನಗಳ ನಂತರ ಬಂದವು.ಕೆಲಸದ ಸಮಯದಲ್ಲಿ ವಿಜ್ಞಾನಿಯಾಗಿ,ಮನೆಯಲ್ಲಿ ಹೆಂಡತಿಯಾಗಿ ಮತ್ತು ಮಕ್ಕಳಿಗೆ ಒಳ್ಳೆಯ ತಾಯಿಯಾಗಿ  ಹೀಗೆ  ಎಲ್ಲಾ ಪಾತ್ರಗಳನ್ನು ಮತ್ತು ಬಹು ಕಾರ್ಯಗಳನ್ನು  ಪರಿಣಾಮಕಾರಿಯಾಗಿ ನಿರ್ವಹಿಸಿ  ಯಶಸ್ವಿ ಮಹಿಳೆಯಾಗಿದ್ದಾರೆ.

ಡಾಕ್ಟರ್ ಟೆಸ್ಸಿ ತನ್ನ ವೈಫಲ್ಯಗಳಲ್ಲಿಯೂ ಪಾಲನ್ನು ಹೊಂದಿದ್ದರೂ, ಅವರು ಮುಂದೆ ಸಾಗುವುದನ್ನು ನಿಲ್ಲಿಸಲು ಹಿಂಜರಿಯುವಿಕೆಯಾಗಲಿ,ಅಥವಾ ಅವರನ್ನು ಹಿಂದೆ ತಿರುಗಿಸಲು,ತಡೆಯಲು ಯಾರಿಂದಲೂ  ಸಾಧ್ಯವಾಗಲಿಲ್ಲ.ಅವರು ನಿರಂತರವಾಗಿ ವೈಫಲ್ಯಗಳನ್ನು ಎದುರಿಸಿದರೂ ಕೂಡಾ  ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಎಂದಿಗೂ ಬಿಟ್ಟು ಕೊಡುವ ಮನಸ್ಸು  ಮಾಡಲಿಲ್ಲ.

ಅವರು ನಿಜವಾಗಿಯೂ ಭಾರತೀಯ ಮಹಿಳೆಯರೆಲ್ಲರಿಗೂ ಮಾದರಿಯಾಗಿದ್ದಾರೆ.ಈ ಕ್ಷಿಪಣಿ ಕಾರ್ಯಕ್ರಮ ಅವರ ಒಂದು ಶ್ಲಾಘನೀಯ ಕೆಲಸವಾಗಿದೆ.ಇದೇ ತರಹ ಕೆಲವೇ ಕೆಲವು ಮಹಿಳೆಯರಲ್ಲಿ ಇವರು ಒಬ್ಬರಾಗಿ  ಪ್ರೀತಿಯಿಂದ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾ ಭಾರತದಲ್ಲಿ ಮೊದಲ ವಿಜ್ಞಾನಿಯಾಗುವ ಮೂಲಕ ತಮ್ಮ ಕನಸನ್ನು  ನನಸು ಮಾಡಿಕೊಂಡಿದ್ದಾರೆ.

ಟೆಸ್ಸಿಯವರ ತರಹದ ಮಹಿಳೆಯರು ತಮ್ಮ  ಗುರುತಿನ ಛಾಪನ್ನು ಮೂಡಿಸಿದ್ದಾರೆ ಇದರ ಜೊತೆಗೆ ಸಾವಿರಾರು ಅನೇಕ ಮಹಿಳೆಯರಿಗೆ  ಸ್ಪೂರ್ತಿಯಾಗಿದ್ದಾರೆ.ಯಶಸ್ಸಿನ ರಸ್ತೆ  ಎಂದಿಗೂ ಯಾರಿಗೂ ಸುಲಭವಾಗಿ ಇರುವುದಿಲ್ಲ.ರಸ್ತೆಯಲ್ಲಿ ಅನೇಕ ತಗ್ಗು,ದಿಬ್ಬಗಳು ಮುಳ್ಳು ಕಲ್ಲುಗಳು ಹೇಗೆ ನಮಗೆ ದಾರಿಯಲ್ಲಿ ಅಡ್ಡವಾಗಿ ಸಿಗುತ್ತವೋ ಹಾಗೆಯೇ ನಮ್ಮ  ಜೀವನದಲ್ಲಿಯೂ ಕೂಡ.ಆದೇ ರೀತಿಯಾಗಿ ಯಶಸ್ಸು ಯಾರಿಗೂ ಆಕಸ್ಮಿಕವಾಗಿ ಸಿಗುವುದೂ ಇಲ್ಲ.ಕಠಿಣ ಪರಿಶ್ರಮ,ಶ್ರದ್ಧೆ,ಸಾಧಿಸುವ ಛಲ,ಎಲ್ಲವನ್ನೂ ಎದುರಿಸುವ ಧೈರ್ಯ ಬೇಕು  ಮತ್ತು ಇವೆಲ್ಲದರಿಂದಲೇ ನಮಗೆ ಕೊನೆಗೆ ಯಶಸ್ಸು ನಮಗೆ ಲಭಿಸುತ್ತದೆ.

ಹೀಗೆ ಕೊನೆಗೂ ಡಾಕ್ಟರ್ ಟೆಸ್ಸಿ ಥಾಮಸ್ ಮೊದಲಾ ಮಹಿಳಾ ವಿಜ್ಞಾನಿಯಾಗಿ  ಭಾರತದಲ್ಲಿ ಗುರುತು ಮೂಡಿಸಿದ್ದಾರೆ.ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇವರೇ  ಜೀವಂತ ಸಾಕ್ಷಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top