fbpx
ಸಮಾಚಾರ

ಟೈಮ್ ನಿಯತಕಾಲಿಯ ವಿವಾದಾತ್ಮಕ ವರದಿ. ಪ್ರಧಾನಿ ಮೋದಿ ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’.

ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯದ ಹಂತ ತಲುಪ್ಪುತ್ತಿರುವಾಗಲೇ ದೇಶದ ಪ್ರತಿಷ್ಠಿತ ನಿಯತಕಾಲಿಕೆ ಎನ್ನಿಸಿಕೊಂಡಿರುವ ‘ಟೈಮ್ ಮ್ಯಾಗಝಿನ್’ ತನ್ನ ಇಪ್ಪತ್ತನೇ ಸಂಚಿಕೆಯ ಮುಖ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪ್ರಕಟಿಸುವುದರ ಜೊತೆಗೆ ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂಬ ತಲೆ ಬರಹವನ್ನು ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

‘ಟೈಮ್ ಮ್ಯಾಗಜಝಿನ್’ 20 ರ ಸಂಚಿಕೆಯಲ್ಲಿ ಈ ವಿವಾದಾತ್ಮಕ ಶೀರ್ಷಿಕೆ ನೀಡಲಾಗಿದ್ದು, ಉಪ ಶೀರ್ಷಿಕೆಯಲ್ಲಿ ‘ಮೋದಿ ದಿ ರಿಫಾರ್ಮರ್‌'(ಮೋದಿ ಓರ್ವ ಸುಧಾರಕ)ಎಂಬ ಸಾಲನ್ನೂ ಸೇರಿಸಿಲಾಗಿದೆ. ಪತ್ರಕರ್ತ ಆತೀಶ್‌ ತಸೀರ್‌ ಪ್ರಧಾನಿ ಮೋದಿ ಕುರಿತ ಈ ಲೇಖನವನ್ನು ಬರೆದಿದ್ದು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇನ್ನು ಐದು ವರ್ಷಗಳ ಕಾಲ ಮೋದಿ ಸರ್ಕಾರವನ್ನು ಸಹಿಸಿಕೊಳ್ಳಲಿದೆಯೇ? ಎಂಬ ಪ್ರಶ್ನೆಯನ್ನು ಈ ಲೇಖನ ಮುಂದಿಡುತ್ತದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದೆ. ಮೋದಿ ಮಾತು ಶುರುಮಾಡಿದರೆ ‘ಕಾಂಗ್ರೆಸ್ ಮುಕ್ತ’ ಭಾರತ ಎನ್ನುತ್ತಾರೆ. ಹಿಂದೂ-ಮುಸ್ಲಿಮರ ನಡುವಣ ಭಾಂದವ್ಯವನ್ನು ಬೆಸೆಯುವ ಪ್ರಯತ್ನಕ್ಕೆ ಮುಂದಾಗುವ ಬದಲು ಬಿಜೆಪಿಗರು ಉಗ್ರ ರಾಷ್ಟ್ರವಾದದ ಹೆಸರಿನಲ್ಲಿ ಸಾಮರಸ್ಯ ತುಂಬಿರುವ ದೇಶದಲ್ಲಿ ನಂಜನ್ನು ಪಸರಿಸಲು ಮುಂದಾಗಿದ್ದಾರೆ. ಮೋದಿಯ ಅಧಿಕಾರವಧಿಯಲ್ಲಿ ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿದ್ದು, ರಾಜಕೀಯ ಪ್ರೇರಿತ ಪ್ರಗತಿಪರರ ಸಾಲು ಸಾಲು ಹತ್ಯೆಗಳು, ದಲಿತರು, ಅಲ್ಪಸಂಖ್ಯಾತರ ಮೇಲೆ ಅಮಾನವೀಯ ಹಲ್ಲೆಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ೨೦೧೪ ರ ಚುನಾವಣೆಯ ಸಂದರ್ಭದಲ್ಲಿ ಮೋದಿ ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನೂ ಇಢೇರಿಸುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಉಗ್ರ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ದೇಶವನ್ನು ಮೋದಿ ಇಬ್ಭಾಗಿಸಲು ಮುಂದಾಗಿದ್ದಾರೆ. ಇದೆಲ್ಲದರ ನಂತರವೂ ಜನರು ಮೋದಿಯನ್ನು ಮತ್ತೆ ಆಯ್ಕೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನು ‘ಟೈಮ್ ನಿಯತಕಾಲಿಕೆ ಮುಂದಿಟ್ಟಿದೆ.

‘ಟೈಮ್’ ನಿಯತಕಾಲಿಕೆಯ ಈ ನಡೆಗೆ ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top