fbpx
ಸಮಾಚಾರ

ಈ ಕಾರಣಕ್ಕಾಗಿ ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟಿ ಹರಿಪ್ರಿಯಾ.

ಹರಿಪ್ರಿಯಾ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಹೌದು ಹರಿಪ್ರಿಯಾ ನಟನೆಯ ‘ಸೂಜಿದಾರ’ ಸಿನಿಮಾ ಇತ್ತೀಚೆಗೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು, ಆದರೆ ಸಿನಿಮಾ ನೋಡಿದ ಹರಿಪ್ರಿಯಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು ಹಾಗಾಗಿ ಹರಿಪ್ರಿಯಾ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿವರವಾಗಿ ಬರೆದುಕೊಂಡಿದ್ದು ಕ್ಷಮೆ ಕೇಳಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವ ಹರಿಪ್ರಿಯಾ ಅವರು ಈ ಬಾರಿ ಹೆಚ್ಚು ಬೇಸರಗೊಂಡಿದ್ದಾರೆ.

 

 

ಸೂಜಿದಾರ ಚಿತ್ರದ ಬಗ್ಗೆ ಅಭಿಮಾನಿಗಳು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೊಂದಿದ್ದವರಿಗೆ ನಿರಾಸೆಯಾಗಿದೆ. ನಿಜ ಹೇಳಬೇಕೆಂದರೆ ನನಗೂ ಮೊದಲ ಬಾರಿ ಸಿನಿಮಾ ನೋಡಿದ ವೇಳೆ ನನಗೂ ತುಂಬಾ ನಿರಾಸೆ ಮತ್ತು ಬೇಸರವಾಯಿತು. ಆದರೆ ಚಿತ್ರತಂಡ ಮೊದಲು ನನಗೆ ಹೇಳಿದ ಕಥೆ ಇದಾಗಿರಲಿಲ್ಲ. ಅನಗತ್ಯವಾಗಿ ಕೆಲ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರೆ. ಆದರೆ ನಿರ್ಮಾಪಕರ ಒಳಿತಿಗಾಗಿ ನಾನು ಸುಮ್ಮನಾದೆ. ಉತ್ತಮ ಚಿತ್ರವನ್ನು ಮಾಡುವುದು ಚಿತ್ರತಂಡದ ಗುರಿಯಾಗಿತ್ತು ಆದರೆ ಕೊನೆಗೆ ಏನಾಯಿತು ನೋಡಿ. ನನ್ನ ಕಡೆಯಿಂದ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದು, ಇಂತಹ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ.. ಮುಂದಿನ ಸಿನಿಮಾಗಳಲ್ಲಿ ನೀವು ಮೆಚ್ಚಿಕೊಳ್ಳುವಂತಹ ಸಿನಿಮಾ ಮಾಡುತ್ತೇನೆ. ಈ ಭಾರಿ ಕ್ಷಮೆಯಿರಲಿ” ಎಂದಿದ್ದಾರೆ.

 

View this post on Instagram

Hey ppl … Sorry … Sorry and Sorry again… My regular fan interaction Sunday turned out to be a thought provoking one instead. Today, a lot of fans and well wishers came home to take selfies as usual but they told me they felt really bad about Soojidhara. They expected to see more of me in Soojidaara and when I wasn’t seen much they had to walk out of the theatre…!!! Frankly speaking that was not the story I was told … they added some unwanted stuff… I was disappointed when I first watched the movie but kept quiet … all I wanted was to support a theatre team to make a full fledged feature film… but look what happened… I am extremely sorry from my end… will not repeat the mistake again … Will make sure I entertain you more in the coming cinemas of mine 🙏🏻

A post shared by Hariprriya (@iamhariprriya) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top