fbpx
ಸಮಾಚಾರ

ಸದ್ದಿಲ್ಲದೇ ದ್ರೋಣ ಸಿನಿಮಾ ಶೂಟಿಂಗ್ ಮುಗಿಸಿಕೊಂಡ ಹ್ಯಾಟ್ರಿಕ್ ಹೀರೊ.

ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ಯಾಕಂದ್ರೆ ಶಿವಣ್ಣನ ಕೈಯಲ್ಲಿರುವ ಸಿನಿಮಾಗಳನ್ನು ನೋಡಿದರೆ ಎಂಥವರೂ ಕಂಗಾಲಾಗುತ್ತಾರೆ. ಸಧ್ಯ ಶಿವಣ್ಣನ ರುಸ್ತುಂ, ದ್ರೋಣ, ಆನಂದ್ ಚಿತ್ರಗಳಲ್ಲಿ ಬ್ಯುಸಿಯಿರುವ ಶಿವಣ್ಣ ಮತ್ತೊಂದು ಸದ್ದಿಲ್ಲದೇ ದ್ರೋಣ ಸಿನಿಮಾದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ.

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರವು ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಚಿತ್ರದಲ್ಲಿ ಶಿವಣ್ಣ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಶಿಕ್ಷಣ ವ್ಯವಸ್ಥೆಯ ಕುರಿತ ಚಿತ್ರವಾಗಿದ್ದು ಕೈಯಲ್ಲಿ ಪೆನ್ನು, ಪುಸ್ತಕ ಹಿಡಿದು ಮಾಡ್ರನ್ ಗುರುವಾಗಿ ಮಕ್ಕಳಿಗೆ ಯಶಸ್ಸಿನ ಪಾಠ ಹೇಳಿಕೊಡಲಿದ್ದಾರೆ

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ – ಜೆ.ಎಸ್.ವಾಲಿ, ಸಂಗೀತ – ರಾಮ್‍ಕ್ರಿಶ್, ಸಂಕಲನ – ಬಸವರಾಜ ಅರಸ್, ಕಲೆ- ಮೋಹನ್ ಪಂಡಿತ್, ಸಹ ನಿರ್ದೇಶನ – ಭವಾನಿ ಶಂಕರ್, ಸಾಹಸ- ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ-ವಜ್ರೇಶ್ವರಿ ಮಲ್ಲಿಕಾರ್ಜುನ, ಕರುನಾಡ ಚಕ್ರವರ್ತಿ ಡಾ|| ಶಿವರಾಜ್ ಕುಮಾರ್, ಅಭಿನಯಿಸುವ ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್ ಮುಂತಾದವರಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top