fbpx
ಸಮಾಚಾರ

‘ನಿಖಿಲ್‌ ಎಲ್ಲಿದ್ದೀಯಪ್ಪಾ’ ಸಿನಿಮಾಗೆ ಶುಭ ಹಾರೈಸಿ ನಿಖಿಲ್ ಕಾಲೆಳೆದ ಅಭಿಷೇಕ್.

ಅದೇನೋ ಹೊಸ ಸಿನಿಮಾ ಮಾಡುತ್ತಾರೆಂದು ಕೇಳಲ್ಪಟ್ಟೆ. ಅವರಿಗೆ ಗುಡ್‌ ಲಕ್‌ ಎಂದು ಹೇಳುವ ಮೂಲಕ ಮಾಜಿ ಸಚಿವ ದಿವಂಗತ ಅಂಬರೀಷ್‌ ಪುತ್ರ ಅಭಿಷೇಕ್‌ ಅವರು ನಿಖಿಲ್‌ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.

ತಾಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಅಭಿಮಾನಿಯೊಬ್ಬರ ಗೃಹಪ್ರವೇಶ ಕಾರ‍್ಯಕ್ರಮಕ್ಕೆ ಸೋಮವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ ಅಭಿಷೇಕ್ ಅದೇನೋ ಹೊಸ ಸಿನಿಮಾ ಮಾಡುತ್ತಾರೆಂದು ಕೇಳಿದ್ದೇನೆ. ನಿಖಿಲ್‌ ಎಲ್ಲಿದ್ದೀಯಪ್ಪಾ? ಸಿನಿಮಾಗೆ ನಿಖಿಲ್‌ ಹೀರೋ ಎನ್ನಲಾಗುತ್ತಿದೆ. ಗುಡ್‌ಲಕ್‌ ಎನ್ನುವ ಮೂಲಕ ಪರೋಕ್ಷವಾಗಿ ನಿಖಿಲ್‌ಕುಮಾರ ಸ್ವಾಮಿ ಅವರ ಕಾಲೆಳೆದರು.

”ನಮಗೆ ಮತದಾನ ನಡೆದ ದಿನವೇ ಫಲಿತಾಂಶ ಏನು ಎಂಬುದು ಗೊತ್ತಾಗಿದೆ. ಹೀಗಾಗಿ ಯಾವುದೇ ಸರ್ವೆಗಳನ್ನು ಮಾಡಿಸಿಲ್ಲ. ಮೇ ತಿಂಗಳು ನಮ್ಮ ಕುಟುಂಬಕ್ಕೆ ವಿಶೇಷವಾದುದು. 23ರಂದು ಅಮ್ಮನ ಚುನಾವಣೆಯ ಫಲಿತಾಂಶ, 29ಕ್ಕೆ ಅಪ್ಪನ ಹುಟ್ಟು ಹಬ್ಬ, ಮೇ ಅಂತ್ಯಕ್ಕೆ ನನ್ನ ‘ಅಮರ್‌’ ಸಿನೆಮಾ ಬಿಡುಗಡೆಯಾಗಲಿದೆ” ಎಂದರು.

“ಚುನಾವಣೆ ಗೆಲುವಿಗಾಗಿ ಯಾವ ಸರ್ವೇ ಮಾಡಿಸಿದ್ರೂ, ಎಷ್ಟೇ ದೇವಾಲಯಗಳನ್ನ ಸುತ್ತಿದ್ರೂ ಫಲಿತಾಂಶದಲ್ಲಿ ಬದಲಾವಣೆ ಆಗಲ್ಲ. ಫಲಿತಾಂಶ ಏನಿದ್ರು ಮತಯಂತ್ರದಲ್ಲಿ ಅಡಗಿದೆ, ಅದು ಮೇ.23ಕ್ಕೆ ಹೊರ ಬೀಳಲಿದೆ” ಎಂದು ಹೇಳಿ ಪದೇ ಪದೇ ದೇವಾಲಯಗಳಿಗೆ ಬೇಟಿಕೊಡುತ್ತಿರುವ HDK ಕುಟುಂಬಕ್ಕೆ ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top