fbpx
ಸಮಾಚಾರ

ಗಮನಿಸಿ- ಕೂಡಲೇ ನಿಮ್ಮ ಫೋನಲ್ಲಿರುವ ವಾಟ್ಸ್​ಆ್ಯಪ್​​ ಅಪ್​ಡೇಟ್​​ ಮಾಡಿಕೊಳ್ಳಿ,ಇಲ್ಲದಿದ್ದರೆ?

ನಿಮ್ಮ ಮೊಬೈಲ್‌ನಲ್ಲಿನ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಂಡಿದ್ದು ಯಾವಾಗ? ನಿಮ್ಮ ಕೆಲಸಗಳ ನಡುವೆ ಅದನ್ನು ನಿರ್ಲಕ್ಷಿಸಿದ್ದರೆ, ತಕ್ಷಣವೇ ಅದನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ಇಷ್ಟು ತುರ್ತಾಗಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಿ ಎಂದು ಹೇಳುತ್ತಿರುವುದು ಏಕೆ ಅಂತೀರಾ? ಮುಂದೆ ಓದಿ..

ವಾಟ್ಸ್‌ಆ್ಯಪ್‌ನಲ್ಲಿ ಭದ್ರತೆಯ ದೋಷ ಕಂಡುಬಂದಿದೆ. ಇದನ್ನು ಪತ್ತೆ ಮಾಡಿರುವ ವಾಟ್ಸ್‌ಆ್ಯಪ್‌, ಅದಕ್ಕೊಂದು ಪರಿಹಾರವನ್ನು ನೀಡಿ ಅಪ್ಲಿಕೇಷನ್‌ ಅನ್ನು ಅಪ್‌ಡೇಟ್‌ ಮಾಡಿದೆ. ಇಸ್ರೇಲ್ ಮೂಲದ ಎನ್‍ಎಸ್ಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ಈ ಹ್ಯಾಕ್ ಮಾಡಿದೆ. ಒಂದು ತಿಂಗಳ ಹಿಂದೆಯೇ ಈ ವಿಚಾರ ಬೆಳಕಿಗೆ ಬಂದಿದ್ದು ಶುಕ್ರವಾರ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ಶನಿವಾರ ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ..

ನಿಮ್ಮ ಮೊಬೈಲ್ ಗೆ ದಾಳಿ ಹೇಗೆ ಆಗುತ್ತದೆ:
ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ.

ನಿಮ್ಮ ವಯಕ್ತಿಕ ಮಾಹಿತಿಗಳ ಭದ್ರತೆಗಾಗಿ ನೀವು ಕೂಡ ನಿರ್ಲಕ್ಷಿಸದೆ ಈಗಲೇ ಅಪ್ ಡೇಟ್ ಮಾಡಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top