fbpx
ಸಮಾಚಾರ

ದರ್ಶನ್ ಸಾಮಾಜಿಕ ಕಳಕಳಿಗೆ ಕೈ ಜೋಡಿಸಿದ ಕಾಮಿಡಿ ಕಿಂಗ್ ಚಿಕ್ಕಣ್ಣ.

ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ. ದರ್ಶನ್ ಸೆರೆ ಹಿಡಿದಿದ್ದ ಕಾಡಾನೆಯ ಫೋಟೋವನ್ನು, ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿಸಿದ್ದಾರೆ.

ನಟ ದರ್ಶನ್ ತಿಂಗಳ ಹಿಂದೆಯಷ್ಟೇ ಫೋಟೊಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದ್ದರು. ಇದರಿಂದ ಬಂದ ಹಣವನ್ನು ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಇದೀಗ ಚಿಕ್ಕಣ್ಣ ಒಂದು ಲಕ್ಷ ರೂಪಾಯಿ ನೀಡಿ ಬೃಹತ್ ಫೋಟವೊಂದನ್ನು ಖರೀದಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು’ ಎಂದು ಬರೆದುಕೊಂಡಿದ್ದಾರೆ.

 

 

ದರ್ಶನ್ ಬಿಡುವಿದ್ದಾಗೆಲ್ಲಾ ಕಾಡಿನಲ್ಲಿ ಕಾಲ ಕಳೆಯುತ್ತಾರೆ. ಅಲ್ಲದೇ ವನ್ಯಜೀವಿ ಹಾಗೂ ಪ್ರಕೃತಿ ಫೋಟೋಗ್ರಾಫಿ ಬಗ್ಗೆ ದರ್ಶನ್ ಹೆಚ್ಚು ಆಸಕ್ತರಾಗಿದ್ದು, ವನ್ಯಜೀವಿಗಳ ಜೀವನವನ್ನು ತಮ್ಮ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿಯುತ್ತಾರೆ.. ಈ ಹಿಂದೆ ತಾವು ಸೆರೆ ಹಿಡಿದ್ದ ಫೋಟೋಗಳನ್ನು ಹರಾಜು ಹಾಕಿದ್ದರು.ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ದೇಣಿಗೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top