fbpx
ಸಮಾಚಾರ

ಇನ್ಫೋಸಿಸ್ ಫೌಂಡೇಷನ್ ನೋಂದಣಿ ರದ್ದುಪಡಿಸಿದ ಕೇಂದ್ರ ಸರ್ಕಾರ.

ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್‍ನ ಸರ್ಕಾರೇತರ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ. ವಿದೇಶದಿಂದ ದೇಣಿಗೆ ಪಡೆಯುವ ವಿಚಾರದಲ್ಲಿ ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣಾ ಕಾಯ್ದೆ(ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಗೃಹ ಸಚಿವಾಲಯ ಇನ್ಫೊಸಿಸ್ ಫೌಂಡೇಷನ್ ಗೆ ವಾರ್ಷಿಕ ಆದಾಯ-ವೆಚ್ಚಗಳ ಕುರಿತ ಮಾಹಿತಿ ಒದಗಿಸಲು ಕೇಳಿತ್ತು. ಕಳೆದ ಆರು ವರ್ಷಗಳ ಲೆಕ್ಕ ಸಲ್ಲಿಸಲು ಸಚಿವಾಲಯ ಮಾಡಿದ್ದ ಮನವಿ ಪೂರೈಸಲು ಫೌಂಡೇಷನ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಶೋಕಾಸ್ ನೊಟೀಸ್ ನಿಡಲಾಗಿತ್ತು. ಆದರೂ ಸಂಸ್ಥೆ ಸೂಕ್ತ ಲೆಕ್ಕಪತ್ರ ನೀಡಿರಲಿಲ್ಲ.

ಇನ್ಫೋಸಿಸ್ ಫೌಂಡೇಶನ್ 6 ವರ್ಷದ ಹಿಂದಿನ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸದ ಕಾರಣ ಗೃಹ ಇಲಾಖೆ ಕಳೆದ ವರ್ಷವೇ ಶೋಕಾಸ್ ನೋಟಿಸ್ ಕಳುಹಿಸಿತ್ತು. ಆದರೆ ಸಂಸ್ಥೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1996 ರಲ್ಲಿ ಸ್ಥಾಪನೆಗೊಂಡ ಇನ್ಫೋಸಿಸ್ ಫೌಂಡೇಷನ್ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಕಲೆ ಮತ್ತು ಸಂಸ್ಕೃತಿ, ಮತ್ತು ಅನಾಥ ಮಕ್ಕಳ ಆರೈಕೆಗಾಗಿ ನೆರವು ನೀಡುತ್ತದೆ.ಖ್ಯಾತ ಸಾಫ್ಟ್ ವೇರ್ ಉದ್ಯಮಿ ನಾರಾಯಣ ಮೂರ್ತಿ ಪತ್ನಿ ಸುಧಾ ಮೂರ್ತಿ ಈ ಫೌಂಡೇಷನ್ ನ ಅಧ್ಯಕ್ಷೆಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top