fbpx
ಸಮಾಚಾರ

ಡಾ.ವಿಷ್ಣು ಜೊತೆ ನಟಿಸಿದ್ದ ಈ ಮುದ್ದು ಹುಡುಗಿ ಈಗ ಸೌತ್ ಸೂಪರ್ ಸ್ಟಾರ್ ನಟನ ಪತ್ನಿ.

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜೊತೆ ‘ಈ ಜೀವನ ನಿನಗಾಗಿ’ ಚಿತ್ರದಲ್ಲಿ ಅಭಿನಯ ಮಾಡಿದ್ದ ಈ ಪುಟ್ಟ ಬಾಲಕಿ ಯಾರು ಅಂತ ನೀವು ಯೋಚನೆ ಮಾಡುತ್ತಿದ್ದೀರಾ. ಈ ಪುಟ್ಟ ಬಾಲಕಿ ಈಗ ದಕ್ಷಿಣ ಭಾರತ ಟಾಪ್ ನಟನ ಪತ್ನಿಯಾಗಿದ್ದಾರೆ.

ಇವರ ಹೆಸರು ಶಾಲಿನಿ, ಬೇಬಿ ಶಾಮಿಲಿ ಅವರ ಸಹೋದರಿ. ಶಾಲಿನಿ ಈಗ ತಮಿಳಿನ ಖ್ಯಾತ ನಟ ಅಜಿತ್ ಅವರನ್ನು ಮದುವೆ ಆಗಿದ್ದಾರೆ.

 

 

 

20 ನವೆಂಬರ್ 1979 ರಂದು ಮಲಯಾಳಿ ಪೋಷಕರಾದ ಬಾಬು ದಂಪತಿಗಳಿಗೆ ಶಾಲಿನಿ ಜನಿಸಿದರು. ಮಲಯಾಳಂನ ಎಂಟೆ ಮಮಟ್ಟಿಕುಟ್ಟಿಯಾಮ್ಮಕ್ಕು ಚಿತ್ರದಲ್ಲಿ ಬಾಲ ನಟಿಯಾಗಿ ಮೂರೂ ವರ್ಷ ವಯಸ್ಸಿನವಳಿದ್ದಾಗ ಸಿನಿಮಾ ರಂಗಕ್ಕೆ ಕಾಲಿಟ್ಟಳು. ನಂತರ ಇವರ ಪೋಷಕರು ಮದ್ರಾಸ್ ( ಇಂದಿನ ಚೆನ್ನೈಗೆ ) ಸ್ಥಳಾಂತರವಾದರು. “ಆನಿಯತಿ ಪ್ರವು” ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡರು ಆ ಸಿನಿಮಾ ಸೂಪರ್ ಹಿಟ್ ಆಗಿ ಇವರನ್ನು ಉಂತ್ತುಂಗಕ್ಕೆ ಏರಿಸಿತು.

ಶಾಲಿನಿ ಅವರು ಬಾಲನಟಿಯಾಗಿಯೇ ಅತಿ ಹೆಚ್ಚು ಸಿನಿಮಾಗಳನ್ನು ಮಾಡಿ ಜನಪ್ರಿಯರಾಗಿದ್ದರು. ನಾಯಕ ನಟಿಯಾಗಿ 12 ಸಿನಿಮಾಗಳನ್ನು ಮಾಡಿದ್ದಾರೆ. ತಮಿಳು ನಟ ಅಜಿತ್ ಜೊತೆ 1999 ರಲ್ಲಿ ಅಮರ್ಕಲಮ್ ಎಂಬ ಸಿನಿಮಾ ಮಾಡುತ್ತಿದ್ದರು ಆಗ ಅಜಿತ್ ಜೊತೆ ಇವರಿಗೆ ಪ್ರೀತಿಯಾಗಿ ನಂತರ ಪೋಷಕರ ಅನುಮತಿ ಪಡೆದು ಮದುವೆಯಾದರು. ಈಗ ಇಬ್ಬರು ಮಕ್ಕಳಿದ್ದು ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top