fbpx
ಸಮಾಚಾರ

ವಿಶ್ವಕಪ್ 2019- ಗಾಯಾಳು ಕೇದಾರ್ ಜಾಧವ್ ಬದಲು ಅಕ್ಷರ್ ಪಟೇಲ್ ಆಯ್ಕೆ?

ಬಹು ನಿರೀಕ್ಷಿತ ಐಸಿಸಿ 2019 ಏಕದಿನ ವಿಶ್ವಕಪ್‌ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 30 ರಿಂದ ಆರಂಭವಾಗುವ ಈ ಕ್ರೀಡಾ ಹಬ್ಬ ಜುಲೈ 14 ರವರೆಗೆ ನಡೆಯಲಿದ್ದು, ಎಲ್ಲ ತಂಡಗಳು ಅದಾಗಲೆ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ಈ ಮಧ್ಯೆ ಟೀಂ ಇಂಡಿಯಾ ಆಲ್ರೌಂಟರ್ ಆಟಗಾರ ಕೇದರ್ ಜಾಧವ್ ಇಂಜುರಿಗೆ ತುತ್ತಾಗಿದ್ದು, ಇನ್ನೂ ಗುಣಮುಖರಾಗಿಲ್ಲ. ಐಪಿಎಲ್​​ನಲ್ಲಿ ಸಿಎಸ್​ಕೆ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಗಿರುವ ಜಾಧವ್ ಭುಜದ ನೋವಿನಿಂದ ಬಳಲುತ್ತಿದ್ದು, ಐಪಿಎಲ್​ನ ಅಂತಿಮ ಹಂತದಲ್ಲಿ ಹೊರಗುಳಿದಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದ ಪರಿಣಾಮ ಎಡಭುಜದ ನೋವಿಗೆ ಒಳಗಾಗಿ ಜಾಧವ್ ಮೈದಾನ ತೊರೆದಿದ್ದರು.

ಸದ್ಯ ಜಾಧವ್ ಅವರಿಗೆ ಮೇ 23ರ ಒಳಗಾಗಿ ಫಿಟ್ ಆದರೆ ಮಾತ್ರ ವಿಶ್ವಕಪ್​ನಲ್ಲಿ ಆಡಬಹುದಾಗಿದೆ. ಐಸಿಸಿ ನಿಮಯದ ಪ್ರಕಾರ ಯಾವುದೇ ತಂಡ ಮೇ 23ರ ಒಳಗಾಗಿ ತನ್ನ ತಂಡದಲ್ಲಿ ಬದಲಾವಣೆ ತರಬಹುದಾಗಿದೆ. ಹೀಗಾಗಿ ಮೇ 23ರ ಮೊದಲು ಜಾಧವ್ ಫಿಟ್ ಆದರೆ ವಿಶ್ವಕಪ್​​ನಲ್ಲಿ ಆಡಬಹುದು. ಎಲ್ಲದರು ಗುಣಮುಖರಾಗಿಲ್ಲ ಎಂದಾದರೆ ಭಾರತ ತಂಡಕ್ಕೆ ಬೇರೆ ಆಟಗಾರನನ್ನು ಆಯ್ಕೆ ಮಾಡಬೇಕಾಗುತ್ತದೆ.

. ಜಾಧವ್ ಚೇತರಿಸಿಕೊಳ್ಳುತ್ತಿರುವತ್ತ ಬಿಸಿಸಿಐ ಕಣ್ಣಿಟ್ಟಿದೆಯಲ್ಲದೆ, ಒಂದು ವೇಳೆ ಜಾಧವ್ ಗಾಯ ಚೇತರಿಕೆ ಕಾಣದಿದ್ದರೆ ಅವರ ಬದಲಿಗೆ ಅಕ್ಷರ್ ಇಲ್ಲವೆ ರಾಯುಡು ಕರೆತರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಯಾವುದಕ್ಕೂ ಜಾಧವ್ ಸುಧಾರಣೆ ಖಾತ್ರಿ ಪಡಿಸಿಕೊಳ್ಳಲು ಬಿಸಿಸಿಐ ಇನ್ನೊಂದಿಷ್ಟು ದಿನ ಕಾಯಲಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top