fbpx
ಸಮಾಚಾರ

ಬ್ರೇಕಿಂಗ್ ನ್ಯೂಸ್- ವಿಶ್ವಕಪ್ ಆಡಲು ಜಾದವ್ ಫಿಟ್,

ಬಹು ನಿರೀಕ್ಷಿತ ಐಸಿಸಿ 2019 ಏಕದಿನ ವಿಶ್ವಕಪ್‌ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 30 ರಿಂದ ಆರಂಭವಾಗುವ ಈ ಕ್ರೀಡಾ ಹಬ್ಬ ಜುಲೈ 14 ರವರೆಗೆ ನಡೆಯಲಿದ್ದು, ಎಲ್ಲ ತಂಡಗಳು ಅದಾಗಲೆ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ಈ ಮಧ್ಯೆ ಟೀಂ ಇಂಡಿಯಾ ಆಲ್ರೌಂಟರ್ ಆಟಗಾರ ಕೇದರ್ ಜಾಧವ್ ಇಂಜುರಿಗೆ ತುತ್ತಾಗಿದ್ದ ಕೇದಾರ್ ಜಾದವ್ ಗುಣರಾಗಿದ್ದು ವಿಶ್ವಕಪ್ ತಂಡದಲ್ಲಿ ಆಡಲು ಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.,

 

 

ಐಪಿಎಲ್​​ನಲ್ಲಿ ಸಿಎಸ್​ಕೆ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಗಿರುವ ಜಾಧವ್ ಭುಜದ ನೋವಿನಿಂದ ಬಳಲುತ್ತಿದ್ದರು, ಐಪಿಎಲ್​ನ ಅಂತಿಮ ಹಂತದಲ್ಲಿ ಹೊರಗುಳಿದಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದ ಪರಿಣಾಮ ಎಡಭುಜದ ನೋವಿಗೆ ಒಳಗಾಗಿ ಜಾಧವ್ ಮೈದಾನ ತೊರೆದಿದ್ದರು.

ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್​ನ 11 ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಮರ ಏರ್ಪಡಲಿದ್ದು, 46 ದಿನಗಳ ಕಾಲ ಬಲಿಷ್ಠ ತಂಡಗಳ ನಡುವೆ ಕದನ ನಡೆಯಲಿದೆ. ಅಂದಹಾಗೆ ಜೂನ್​ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಬೇಟೆಯನ್ನು ಆರಂಭಿಸಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top