fbpx
ಸಮಾಚಾರ

ಕೊನೆಗೂ ಫಿಕ್ಸ್ ಆಯಿತು ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ರಿಲೀಸ್ ಡೇಟ್- ಆಗಸ್ಟ್ 9ಕ್ಕೆ ಬಿಡುಗಡೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಯಾವಾಗಲೋ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇತ್ತು.. ಒಂದಲ್ಲ ಒಂದು ಕಾರಣ ಹೇಳುತ್ತಾ ಚಿತ್ರವನ್ನು ಮುಂದೂಡುತ್ತಲೇ ಬಂದಿದ್ದ ಕುರುಕ್ಷೇತ್ರ ಸಿನಿಮಾ ಇಷ್ಟೊಂದು ಲೇಟ್ ಆಗುತ್ತಿರುವುದಕ್ಕೆ ಸ್ವತಃ ದರ್ಶನ್ ಅಭಿಮಾನಿಗಳಲ್ಲಿ ಅಸಹನೆ ಮತ್ತು ಬೇಸರ ಮೂಡಿಸಿರುವುದು ಸುಳ್ಳಲ್ಲ.. ಆದರೆ ಇದೀಗ ಅಂತವರಿಗೆ ನಿರ್ಮಾಪಕ ಮುನಿರತ್ನ ಕಡೆಯಿಂದ ಅಧಿಕೃತ ಸುದ್ದಿಯೊಂದು ಸಿಕ್ಕಿದೆ.

ಕುರುಕ್ಷೇತ್ರ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕ ಮುನಿರತ್ನ ದಿಢೀರ್ ಅಂತ ಘೋಷಣೆ ಮಾಡಿದ್ದಾರೆ. ‘ಕುರುಕ್ಷೇತ್ರ’ ಚಿತ್ರ ಆಗಸ್ಟ್ 09ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮುನಿರತ್ನ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಚಿತ್ರವು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ರಿಲೀಸ್ ಆಗುತ್ತಿದ್ದು 3D ತಂತ್ರಜ್ಞಾನದಲ್ಲೂ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಇನ್ನು ಜುಲೈ ಮೊದಲನೇ ವಾರದಂದು ಆಡಿಯೋ ಲಾಂಚ್ ನಡೆಯಲಿದೆ.

ಅಂದಹಾಗೆ ಕುರುಕ್ಷೇತ್ರ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ರವಿಶಂಕರ್, ಮೇಘನಾ ರಾಜ್, ಭಾರತೀ ವಿಷ್ಣುವರ್ಧನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. .ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top