fbpx
ಸಮಾಚಾರ

ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎಗೆ ಬಹುಮತ- ಸೆನ್ಸೆಕ್ಸ್ 1,098 ಅಂಕ ಏರಿಕೆ.

ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಬಹಿರಂಗವಾದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಸುನಾಮಿ ಏರಿಕೆ ಕಂಡುಬಂದಿದೆ. ಎನ್‌ಡಿಎ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ನುಡಿಗೆ ಷೇರು ಸೂಚ್ಯಂಕ 1,098 ಅಂಕ ಏರಿಕೆ ಕಂಡಿದೆ. ಮಧ್ಯಾಹ್ನದ ಹೊತ್ತಿಗೆ ಬಿಎಸ್ಇ ಸೆನ್ಸೆಕ್ಸ್ 1,098 ಅಂಕಗಳ ಏರಿಕೆ ಕಂಡುಕೊಂಡಿದ್ದು ನಿಫ್ಟಿ 327 ಅಂಕ ಏರಿಕೆಯಾಗಿದೆ.

ಎಕ್ಸಿಟ್‌ ಪೋಲ್‌ಗಳು ಮತ್ತು ಗುರುವಾರ ಪ್ರಕಟವಾಗಲಿರುವ ಲೋಕಸಭೆ ಚುನಾವಣೆಯ ಫಲಿತಾಂಶಗಳು ಸೆನ್ಸೆಕ್ಸ್‌ ಏರಿಳಿತಕ್ಕೆ ಕಾರಣವಾಗಲಿದೆ. ಏತನ್ಮಧ್ಯೆ, ವಿದೇಶಿ ಪ್ರಭಾವಗಳು ಮಾರುಕಟ್ಟೆ ಮೇಲೆ ಇರುತ್ತವೆ. ಕಳೆದ ವಾರ ತೀವ್ರ ಕುಸಿದಿದ್ದ ಸೆನ್ಸೆಕ್ಸ್‌, ಎಕ್ಸಿಟ್‌ ಪೋಲ್‌ ಹಿನ್ನೆಲೆಯಲ್ಲಿ ಒಂದೇ ದಿನ 500ಕ್ಕೂ ಅಧಿಕ ಅಂಕ ಏರಿಕೆಯಾಗಿತ್ತು. ಆದಾಗ್ಯೂ, ಇವೆಲ್ಲವೂ ಅಲ್ಪಕಾಲೀನ ಪರಿಣಾಮಗಳು ಎನ್ನುತ್ತಾರೆ ತಜ್ಞರು.

ಮಾರುತಿ, ಎಲ್​ ಆ್ಯಂಡ್​ ಟಿ, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಆರ್​ಐಎಲ್​, ಎಂ ಆ್ಯಂಡ್​ ಎಂ, ಇಂಡಸ್​ ಇಂಡ್​ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್, ಯೆಸ್​ ಬ್ಯಾಂಕ್ ಮತ್ತು ವೇದಾಂತ ಸೇರಿದಂತೆ ಹಲವು ಕಂಪನಿಗಳ ಷೇರುಗಳಲ್ಲಿ ಶೇ.4ರಷ್ಟು ಏರಿಕೆ ಆಗಿದೆ. ಮತ್ತೊಂದೆಡೆ ಬಜಾಜ್​ ಆಟೊ, ಇನ್ಫೋಸಿಸ್​ ಮತ್ತು ಸಿಎಲ್​ ಟೆಕ್​ ಷೇರುಗಳು ಶೇ.2ರಷ್ಟು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯ ಏರಿಕೆ
ಮತದಾನೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಡಾಲರ್​ ಎದುರು ರೂಪಾಯಿ ಏರಿಕೆ ಕಂಡು ಬಂದಿದೆ. ಸೋಮವಾರ ಬೆಳಗ್ಗೆ ರೂಪಾಯಿ ಮೌಲ್ಯ 79 ಪೈಸೆ ಏರಿಕೆ ಕಂಡು ಬಂದಿದ್ದು, ಡಾಲರ್​ ಎದುರು ರೂಪಾಯಿ ಮೌಲ್ಯ 69.44 ಗೆ ತಲುಪಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top