fbpx
ಸಮಾಚಾರ

ಧೋನಿ ಸ್ಟೈಲ್ ನಲ್ಲಿ ರನ್ ಔಟ್ ಮಾಡಿದ ಇಂಗ್ಲೆಂಡ್ ಆಟಗಾರ ಆದಿಲ್ ರಶೀದ್-ವಿಡೀಯೋ ವೈರಲ್!

ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಶೀದ್ ಮಾಡಿದ ಅದ್ಭುತ ರನೌಟ್ ಎಲ್ಲರನ್ನು ನಿಬ್ಬೆರಗಾಗಿಸಿದೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್, ಧೋನಿ ಸ್ಟೈಲ್ ಅನುಕರಿಸಿ ಸುದ್ದಿಯಾಗಿದ್ದಾರೆ. ಧೋನಿ ರೀತಿ ರನೌಟ್ ಮಾಡುವಲ್ಲಿ ಯಶಸ್ವಿಯಾಗಿರುವ ಆದಿಲ್ ರಶೀದ್, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಂಡದ ಪರ 27ನೇ ಓವರ್ ಬೌಲಿಂಗ್ ಮಾಡಿದ ಅದಿಲ್ ರಶೀದ್ ಅವರ ಕೊನೆಯ ಎಸೆತದಲ್ಲಿ ಸರ್ಫರಾಜ್ ಅಹ್ಮದ್ ರನ್ ಕದಿಯಲು ಪ್ರಯತ್ನಿಸಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಬಾಬರ್ ಜೋರಾಗಿ ಓಡಿದರು. ಆದರೆ ಸರ್ಫರಾಜ್ ರನ್ ಬೇಡ ಎಂದು ಹಿಂದಕ್ಕೆ ಹೋದರು. ಆದರೆ ಅಷ್ಟರಲ್ಲಿ ಕೀಪರ್ ಜೋಸ್ ಬಟ್ಲರ್ ಚೆಂಡನ್ನು ಅದಿಲ್ ರಶೀದ್ ಕೈಗೆ ಎಸೆದರು. ಚೆಂಡನ್ನು ಹಿಡಿದ ರಶೀದ್ ಹಿಮ್ಮುಖವಾಗಿ ಚೆಂಡನ್ನು ವಿಕೆಟ್ ಗೆ ಎಸೆದು ರನೌಟ್ ಮಾಡಿದರು.

 

 

ಇಂತಹ ಹಿಮ್ಮುಖ ರನೌಟ್ ಅಥವಾ ಸ್ಟಂಪ್ ಮಾಡುವುದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿಸ್ಸೀಮರು. 2016ರಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್‌ನ್ನು ಧೋನಿ ಇದೇ ರೀತಿ ರನೌಟ್ ಮಾಡಿದ್ದರು. ಇದೀಗ ರಶೀದ್ ಅದ್ಬುತ ರನೌಟ್ ಮಾಡಿ 80 ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದ ಬಾಬರ್ ವಿಕೆಟ್ ಕಬಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top