fbpx
ಸಮಾಚಾರ

ರಾಮ ಜನ್ಮಭೂಮಿಯಲ್ಲಿ ಹಿಂದೂ-ಮುಸಲ್ಮಾನ್ ಸಹೋದರತ್ವ- ಸೀತಾರಾಮ ಮಂದಿರದಲ್ಲಿ ಇಫ್ತಾರ್ ಕೂಟ, ನಮಾಜ್ ಪಠಣ.

ಅಯೋಧ್ಯೆ ಎಂದರೆ ಸದಾ ಧಾರ್ಮಿಕ ವೈಷಮ್ಯವೇ ನೆನಪಾಗಬಹುದು. ಆದರೆ ಅಲ್ಲಿಯ ಜನರ ಕೋಮು ಸೌಹಾರ್ದತೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ರಾಮ ಮಂದಿರ ಮತ್ತು ಮಸೀದಿಯ ಜಾಗದ ವಿವಾದದಿಂದಷ್ಟೇ ಸುದ್ದಿಯಾಗುವ ಅಯೋಧ್ಯೆಯಲ್ಲಿ ಧಾರ್ಮಿಕ ಸಾಮರಸ್ಯದ ಪ್ರಸಂಗಗಳೂ ನಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮತ್ತೀಗ ರಂಜಾನ್ ಮಾಸ ನಡೆಯುತ್ತಿದ್ದು, ಅಯೋಧ್ಯೆಯ ಜನರು ಸೌಹಾರ್ದತೆಗೆ ಹೊಸ ಭಾಷ್ಯ ಕಲ್ಪಿಸಿದ್ದಾರೆ.

ಅಲ್ಲಿನ ಸೀತಾ ರಾಮ ದೇಗುಲವೊಂದರಲ್ಲಿ ಸೋಮವಾರ ರಂಜಾನ್‌ ಮಾಸಾಚರಣೆಯ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್‌ಗೆ ಆಗಮಿಸಿದ ಮುಸ್ಲಿಂ ಧರ್ಮೀಯರು ಭೋಜನ ಸ್ವೀಕರಿಸಿದರು. ರೋಜಾ ಇಫ್ತಾರ್ ಗಾಳಿ ಸಾಧುಗಳು ಮುಸ್ಲಿಮರಿಗೆ ಕರ್ಜೂರದ ಜೊತೆಗೆ ದೇವಾಲಯದ ಪ್ರಸಾದ ಲಡ್ಡುವನ್ನು ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಾಜರಿದ್ದ ಎಲ್ಲಾ ಹಿಂದು-ಮುಸ್ಲಿಂ ಮತ್ತು ಸಿಖ್ ಪ್ರತಿನಿಧಿಗಳು ಕೋಮು ಸಾಮರಸ್ಯ ಮತ್ತು ಶಾಂತಿಗಾಗಿ ಶಪಥ ಮಾಡಿದರು. ಈ ರೋಜಾ ಇಫ್ತಾರ್ನಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹೊರತುಪಡಿಸಿ, ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು.

“ದೇವಾಲಯದ ಪ್ರಧಾನ ಅರ್ಚಕ ಯುಗಲ್ ಕಿಶೋರ್ ಮಾತನಾಡಿ, “ನಾವು ಮೂರನೇ ಸಾರಿ ಇಫ್ತಾರ್ ಕೂಟ್ ಆಯೋಜನೆ ಮಾಡಿದ್ದೇವೆ. ಪಕ್ಕದ ಮಸೀದಿಯಲ್ಲಿಯೂ ನವರಾತ್ರಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದೇವೆ. ಪರಷ್ಪರರ ಹಬ್ಬಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆ. ಮುಸ್ಲಿಮರೇನೂ ಇದಕ್ಕೆ ಹೊರತಲ್ಲ. ನವರಾತ್ರಿ ಸಮಯದಲ್ಲಿ ಅವರು ಕೂಡ ಶ್ರದ್ಧಾಭಕ್ತಿಯಿಂದ ವ್ರತದಲ್ಲಿ ತೊಡಗುತ್ತಾರೆ” ಎಂದು ಹೇಳಿದರು.

ರೋಜಾ ಇಫ್ತಾರ್ ಗೆ ಬಂದಿದ್ದ ಮುಜಾಲ್ ಫಿಜಾ ಅವರು ಮಾತನಾಡಿ, “ದೇಶದಲ್ಲಿ ಕೋಮುದ್ವೇಷ ಬೆಳೆಸುತ್ತಿರುವ ಜನರ ಮಧ್ಯೆ ಸೀತಾರಾಮ ದೇಗುಲದ ಪೂಜಾರಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ ನಾವು ಎಂದಿಗೂ ಹೆದರಿಲ್ಲ. ನಾನು ನನ್ನ ಹಿಂದೂ ಸ್ನೇಹಿತರೊಡನೆ ಸೇರಿ ನವರಾತ್ರಿಯನ್ನು ಆಚರಿಸುತ್ತೇನೆ. ನಮ್ಮಲ್ಲಿ ಭೇದಬಾವವಿಲ್ಲ” ಎಂದು ತಿಳಿಸಿದರು.

ಏನಿದು ಇಫ್ತಾರ್ ಕೂಟ:
ರಂಜಾನ್ ಮಾಸದಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಆಹಾರಸೇವನೆ(ಸಹ್ರಿ) ಮುಗಿಸಿ ದಿನವಿಡೀ ಒಂದು ಗುಟುಕು ನೀರನ್ನೂ ಸೇವಿಸದೆ, ಎಲ್ಲಾ ರೀತಿಯ ಮನರಂಜನೆಯನ್ನು ತ್ಯಜಿಸಿ ಸೂರ್ಯಾಸ್ತದ ಬಳಿಕ ಆಹಾರ ಸೇವಿಸುವುದು(ಇಫ್ತಾರ್) ಇಸ್ಲಾಮಿನ ಉಪವಾಸದ ವಿಧಾನ. ಇದೊಂದು ಆಚರಣೆ ಎನ್ನುವುದಕ್ಕಿಂತ ಆರಾಧನೆಯಾಗಿದೆ. ಒಂದು ತಿಂಗಳ ಉಪವಾಸ ವರ್ಷದ ಉಳಿದ ತಿಂಗಳುಗಳ ಜೀವನಕ್ಕೆ ಸ್ಫೂರ್ತಿ ತುಂಬಬಲ್ಲದು ಎಂಬುದು ಅವರ ನಂಬಿಕೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top