fbpx
ಸಮಾಚಾರ

ಆಕಸ್ಮಿಕವಾಗಿ TVಯಲ್ಲಿ ‘ಗಂಧದಗುಡಿ’ ವೀಕ್ಷಿಸಿ ಎಮೋಷನಲ್ ಆದ ಜಗ್ಗೇಶ್.

ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಆಗಾಗ ಜಗ್ಗೇಶ್ ಮನದ ಮಾತುಗಳನ್ನು ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದು ಕಿರುತೆರೆಯಲ್ಲಿ ಗಂಡಾದ ಗುಡಿ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ.

ಅರಣ್ಯ ಅಧಿಕಾರಿಯಾಗಿ ಅಣ್ಣಾವ್ರು, ಖಳನಾಯಕನಾಗಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದ ಈ ಸಿನಿಮಾದಲ್ಲಿ ಮಾತ್ರ ವಿಷ್ಣು ಮತ್ತು ರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ದುರಂತ ಅಂದ್ರೆ ಈ ಸಿನಿಮಾದ ಕ್ಲೈಮ್ಯಾಕ್ಸ್ ವೇಳೆ ನಡೆದ ಒಂದು ಗಂಭೀರ ಘಟನೆಯಿಂದ ರಾಜ್ ಮತ್ತು ವಿಷ್ಣು ಮುಂದೆ ಯಾವ ಸಿನಿಮಾದಲ್ಲೂ ಒಟ್ಟಿಗೆ ನಟಿಸುವ ಅವಕಾಶವೇ ಸಿಗಲಿಲ್ಲ. ಆದರೆ ಸಿನಿಮಾ ನೋಡಿದಾಗಲೆಲ್ಲಾ ಇಬ್ಬರೂ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಬೇಕಿತ್ತು ಎಂಬ ಭಾವನೆ ಮೂಡುವುದಂತೂ ಸಹಜ. ಈಗ ಜಗ್ಗೇಶ್ ಕೂಡ ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್ “ಆಕಸ್ಮಿಕ DD ಅಲ್ಲಿ #ಗಂಧದಗುಡಿ ಚಿತ್ರದ
ಕ್ಲೈಮಾಕ್ಸ್ ನ ಈ ದೃಶ್ಯ ಕಣ್ಣಿಗೆ ಬಿತ್ತು..
ಭಾವುಕನಾದೆ…ಕಾರಣ ಕಲಾವಿದ ದೈಹಿಕವಾಗಿ ಸತ್ತರು ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ ಎಂದು..
ವಿಶ್ವದಲ್ಲಿ ಬೇರೆ ಯಾರಿಗುಂಟು ಈ ಸೌಭಾಗ್ಯ ಅಲ್ಲವೆ..
ನಾನು ಕಂಡ ಈ ದೃಶ್ಯದ ಪಾತ್ರದಾರಿಗಳು
ರಾಜಣ್ಣ ವಿಷ್ಣುಸಾರ್ ಆಧಿವಾನಿ ಲಕ್ಷ್ಮೀಬಾಯ್ ಅಮ್ಮ ಮಕ್ಕಳಾಗಿ ಸಾವಿನಲ್ಲಿ ಒಂದಾಗುವ ಅಮೋಙ್ನ ಅಭಿನಯ ನೀಡಿದ್ದರು…
ಈಗ ಈ ಮೂವರು ವಿಧಿವಶರು ದೈಹಿಕವಾಗಿ..ಮಾನಸಿಕವಾಗಿ ಜೀವಂತರು ತೆರೆಯಮೇಲೆ..
ಹಾಗೆ ನಾನು ಎಷ್ಟು ಅದೃಷ್ಟವಂತ ಕಲಾವಿದನಾಗಿ ಹುಟ್ಟಿದ್ದಕ್ಕೆ.. ಅನ್ನದ ಋಣ ಮುಗಿದಮೇಲೆ ನಾನು ದೈಹಿಕವಾಗಿ ನಿರ್ಗಮಿಸುವೆ ಒಂದುದಿನ.. ಆದರು ಜನಮಾನದಲ್ಲಿ ಉಳಿಯುವ ಯೋಗ ಸಿಕ್ಕಿತ್ತಲ್ಲಾ ಎಂದು
ದೇವರು ಕೊಟ್ಟ ನನ್ನ ಕಲಾಕ್ಷೇತ್ರಕ್ಕೆ ಧನ್ಯವಾದ ಅರ್ಪಿಸಿತು ಧನ್ಯತೆಯಿಂದ ನನ್ನಮನ..
ಶಾಪಗ್ರಸ್ತ ಗಂಧರ್ವರು ಕಲಾವಿದರು..
ವಿಶ್ವದಲ್ಲಿ ಎಲ್ಲರಿಗು ಸಾವುಂಟು ಜನರ ಕಲೆಯಲ್ಲಿ ಸಂತೋಷ ಪಡಿಸುವ ಕಲಾವಿದರಿಗೆ ಇಲ್ಲಾ..ಇದಲ್ಲವೆ ಜನ್ಮಾಂತರಪುಣ್ಯ…
ಕಲಾವಿಶಾರದೆ ಧನ್ಯೋಸ್ಮಿ..” ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top