fbpx
ಸಮಾಚಾರ

ನಿವೃತ್ತಿ ಬಳಿಕ ಈ ಹೊಸ ಕೆಲಸ ಮಾಡ್ತಾರಂತೆ ಚಾಂಪಿಯನ್ ಧೋನಿ.

ಭಾರತ ತಂಡದ ಖ್ಯಾತ ಆಟಗಾರ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತು ನಿರ್ಧರಿಸಿದ್ದಾರೆಯೇ..? ಈ ಪ್ರಶ್ನೆಗೆ ಸ್ವತಃ ಧೋನಿ ಅವರೇ ಉತ್ತರಿಸಿದ್ದು, ಧೋನಿಯ ಒಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 12ನೇ ಏಕದಿನ ವಿಶ್ವಕಪ್‌ ಬಳಿಕ ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿರುವ ನಡುವೆಯೇ ಧೋನಿ ಸೋಮವಾರ ವಿಡಿಯೋವೊಂದನ್ನು ಅಪಲೋಡ್‌ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಧೋನಿ ತಾವು ನಿವೃತ್ತಿ ಬಳಿಕ ಪೇಯಿಟಿಂಗ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದು, ಬಿಡುವಿನ ಸಂದರ್ಭದಲ್ಲಿ ತಾವು ಬಿಡಿಸಿದ ಮೂರು ಪೇಯಿಟಿಂಗ್ ಗಳನ್ನು ಕೂಡ ವಿಡಿಯೋದಲ್ಲಿ ತೋರಿಸಿದ್ದಾರೆ.
‘ಚಿಕ್ಕಂದಿನಿಂದಲೂ ನನಗೆ ಪೇಟಿಂಗ್ ಅಂದ್ರೆ ಇಷ್ಟ.. ಇಷ್ಟು ದಿನ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ನಾನು ಯಾವಾಗಲೂ ಓರ್ವ ಚಿತ್ರಕಾರನಾಗಬೇಕು ಎಂದು ಆಸೆ ಪಟ್ಟಿದ್ದೆ. ಈಗ ಅದಕ್ಕೆ ಸಮಯ ಬಂದಿದ್ದು, ಈಗ ನಾನು ನನ್ನಿಷ್ಟದ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳುವ ಮೂಲಕ ನಿವೃತ್ತಿ ಕುರಿತಂತೆ ಪರೋಕ್ಷ ಹಿಂಟ್ ನೀಡಿದ್ದಾರೆ.

 

 

ಧೋನಿ 3 ಪೇಂಟಿಂಗ್‌ಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಮೊದಲನೆಯದು ನಿಸರ್ಗದ ಚಿತ್ರ, ಎರಡನೇಯದನ್ನು ಅವರು, ‘ಭವಿಷ್ಯದ ವಿಮಾನ’ ಎಂದು ಬಣ್ಣಿಸಿದ್ದಾರೆ. 3ನೇ ಚಿತ್ರದಲ್ಲಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಜೆರ್ಸಿ ತೊಟ್ಟು ಆಡುತ್ತಿರುವ ತಮ್ಮದೇ ಚಿತ್ರವನ್ನು ಬಿಡಿಸಿರುವ ಧೋನಿ, ಆ ಚಿತ್ರವನ್ನು ತಮ್ಮ ನೆಚ್ಚಿನ ಚಿತ್ರ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಪೇಂಟಿಂಗ್‌ಗಳ ಪ್ರದರ್ಶನವನ್ನು ಏರ್ಪಡಿಸುವುದಾಗಿಯೂ ಹೇಳಿರುವ ಧೋನಿ, ಅಭಿಮಾನಿಗಳಿಂದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯುವುದಾಗಿ ತಿಳಿಸಿದ್ದಾರೆ.

ಇನ್ನು ಧೋನಿ ಅವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಧೋನಿ ಯಾವುದೇ ಕಾರಣಕ್ಕೂ ಕ್ರಿಕೆಟ್ ಬಿಡಬಾರದು ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ಧೋನಿ ಅವರಿಗೆ ಇಷ್ಟದ ಕಾರ್ಯವನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಹೇಳುವ ಮೂಲಕ ಧೋನಿ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top