fbpx
ಸಮಾಚಾರ

ಐಶ್ವರ್ಯಾ ರೈ ವಿರುದ್ಧದ ಅಸಭ್ಯ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್.

ಐಶ್ವರ್ಯಾ ರೈ ಕುರಿತಂತೆ ನಟ ವಿವೇಕ್ ಒಬೆರಾಯ್ ಮಾಡಿದ ಟ್ವೀಟ್ ಸಾಕಷ್ಟು ವಿವಾದಕ್ಕೆ ಗುರಿಯಾದ ಕಾರಣ ಈಗ ಅದನ್ನು ಡಿಲೀಟ್ ಮಾಡಿದ್ದಾರೆ. “ಮೀಮ್ಸ್ ಗೆ ನಾನು ಮಾಡಿದ್ದ ಹೇಳಿಕೆಯಿಂದ ಒಬ್ಬೇಒಬ್ಬ ಮಹಿಳೆಗೆ ನೋವಾದರೂ, ಅದಕ್ಕೆ ಕ್ರಮ ತೆಗೆದುಕೊಳ್ಳಲೇಬೇಕು. ದಯವಿಟ್ಟು ಕ್ಷಮಿಸಿ. ನಾನು ಹಿಂದಿನ ಟ್ವಿಟ್ ಅನ್ನು ಡಿಲೀಟ್ ಮಾಡಿದ್ದೇನೆ” ಎಂದು ಚಿತ್ರನಟ ವಿವೇಕ್ ಅಲಿಯಾಸ್ ವಿವೇಕಾನಂದ್ ಓಬೇರಾಯ್ ಅಸಭ್ಯ ಟ್ವೀಟ್ ಗೆ ಕ್ಷಮೆ ಯಾಚಿಸಿದ್ದಾರೆ.

 

 

 

ಹಲವಾರು ಮಂದಿ ವಿವೇಕ್ ಟ್ವೀಟ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಿವೇಕ್ ವಿರುದ್ಧ ಮಹಾರಾಷ್ಟ್ರದ ಮಹಿಳಾ ಆಯೋಗ ಪ್ರಕರಣ ದಾಖಲಿಸಿತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿವೇಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಒಮ್ಮೊಮ್ಮೆ ಕೆಲವು ಸಂಗತಿಗಳನ್ನು ನೋಡಿದ ಕೂಡಲೆ ನಮಗೆ ಫನ್ನಿ ಅನ್ನಿಸುತ್ತವೆ. ಆದರೆ ಕೆಲವರಿಗೆ ಆ ರೀತಿ ಅನ್ನಿಸುವುದಿಲ್ಲ. ಕಳೆದ ಹತ್ತು ವರ್ಷಗಳಿಂದ ನಾನು ಸುಮಾರು ಎರಡು ಸಾವಿರಕ್ಕೂ ಅಧಿಕ ಅಷ್ಟಾಗಿ ಸವಲತ್ತುಗಳಿಲ್ಲದ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದೇನೆ.” ಎಂದಿದ್ದಾರೆ ವಿವೇಕ್ ಒಬೆರಾಯ್.

ವಿವೇಕ್ ಡಿಲೀಟ್ ಮಾಡಿದ್ದ ಟ್ವೀಟ್ ನಲ್ಲೇನಿತ್ತು?
ನಟ ವಿವೇಕ್ ಒಬೆರಾಯ್ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. ಆ ಫೋಟೋದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಇದನ್ನು ಶೇರ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಟ್ವೀಟರಿಗರು ವಿವೇಕ್ ಒಬೆರಾಯ್ ನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top