ಈ ಬಾರಿಯ ವಿಶ್ವಕಪ್ ನಾವು ಗೆದ್ದೇ ಗೆಲ್ತೀವಿ, ಇದನ್ನು ಭಾರತೀಯ ಯೋಧರಿಗೆ ಅರ್ಪಣೆ ಮಾಡ್ತೀವಿ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮುಂಬೈ ನಲ್ಲಿ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ.
ಭಾರತೀಯ ಸೇನೆಯಿಂದ ತಂಡ ಹೇಗೆ ಸ್ಫೂರ್ತಿಗೊಂಡಿದೆ ಎನ್ನುವ ಬಗ್ಗೆ ವಿವರಿಸಿದ ವಿರಾಟ್, ‘ಹಲವು ಮೂಲಗಳಿಂದ ಸ್ಫೂರ್ತಿ ದೊರೆಯುತ್ತದೆ. ಆದರೆ ಭಾರತೀಯ ಸೇನೆಯಿಂದ ಸಿಗುವಷ್ಟು ದೊಡ್ಡ ಸ್ಫೂರ್ತಿ ಬೇರೆಡೆಯಿಂದ ಸಿಗುವುದಿಲ್ಲ. ದೇಶಕ್ಕಾಗಿ ಸೈನಿಕರು ದುಡಿಯವುದರ ಜತೆ ಬೇರಾರಯವುದನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸೇನೆಗಾಗಿ ಏನಾದರೂ ಮಾಡಬೇಕು ಎನ್ನುವ ಮನಸ್ಥಿತಿಯಿಂದ ಹೋದರೆ ನಮ್ಮ ಪ್ರದರ್ಶನ ಗುಣಮಟ್ಟದಲ್ಲಿ ಸುಧಾರಣೆ ಕಾಣಲಿದೆ. ಪ್ರತಿಯೊಬ್ಬರಿಗೂ ವಿಶ್ವಕಪ್ನಲ್ಲಿ ಆಡಲು ಹಲವು ರೀತಿಯಲ್ಲಿ ಸ್ಫೂರ್ತಿಗೊಂಡಿರುತ್ತಾರೆ. ಆದರೆ ಸೇನೆಯನ್ನು ಗಮನದಲ್ಲಿಟ್ಟುಕೊಂಡು ಆಡುವಾಗ ಉತ್ಸಾಹ ಮತ್ತಷ್ಟುಹೆಚ್ಚಲಿದೆ’ ಎಂದರು.
ಈ ಬಾರಿ ವಿಶ್ವಕಪ್ನ ಮಾದರಿಯನ್ನು ಪರಿಗಣಿಸಿ ಹೇಳುವುದಾದರೆ ಖಂಡಿತವಾಗಿಯೂ ಇದು ಅತ್ಯಂತ ಸವಾಲಿನ ವಿಶ್ವಕಪ್. ಇನ್ನು, ತಂಡಗಳತ್ತ ದೃಷ್ಟಿ ಹಾಯಿಸಿದರೂ ಅಲ್ಲಿ ನಿಕಟ ಪೈಪೋಟಿಯ ಸುಳಿವು ಸಿಗುತ್ತದೆ. 2015ರ ವಿಶ್ವಕಪ್ ಬಳಿಕ ಅಫಘಾನಿಸ್ತಾನದಂಥ ಸಾಮಾನ್ಯ ತಂಡಗಳೂ ಪ್ರಗತಿ ಸಾಧಿಸಿವೆ. ಹೀಗಾಗಿ ಪ್ರತಿ ಪಂದ್ಯದಲ್ಲಿ ನಾವು ನಮ್ಮ ಸಾಮರ್ಥ್ಯವೆಲ್ಲವನ್ನೂ ಪಣಕ್ಕಿಡಬೇಕಾಗುತ್ತದೆ,” ಎಂದು ವಿರಾಟ್ ಕೊಹ್ಲಿ ಹೇಳಿದರು
ಅಂದಹಾಗೆ ಟೀಮ್ ಇಂಡಿಯಾ ಜೂನ್ 5ರಂದು ರೋಸ್ ಬೌಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮೊದಲು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಕಾರ್ಯಕ್ರಮವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
