fbpx
ಸಮಾಚಾರ

ನೀರಿನ ಅಭಾವ: ಯಶೋಮಾರ್ಗ ಮೂಲಕ ಕುಡಿಯುವ ನೀರಿನ ವ್ಯವಸ್ಥೆ.

ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಬಿಸಿಲನಾಡು ರಾಯಚೂರಿನಲ್ಲಿ ನಟ ಯಶ್ ನೇತೃತ್ವದ ಯಶೋಮಾರ್ಗದ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಮುಂದಾಗಿದೆ. ರಾಯಚೂರು ತಾಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಇಂದಿನಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 10 ದಿನಗಳ ವರೆಗೆ ಪ್ರತಿ ಗ್ರಾಮಕ್ಕೆ ಮೂರು ಟ್ರಿಪ್‍ನಂತೆ ನೀರು ಕೊಡಲು ಯಶೋಮಾರ್ಗ ತೀರ್ಮಾನಿಸಿದೆ.

ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಬೋರ್ ವೆಲ್‍ಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಉಚಿತವಾಗಿ ಕೊಡಲಾಗುತ್ತಿದೆ. ಸದ್ಯ ಎರಡು ಟ್ರ್ಯಾಕ್ಟರ್ ಗಳ ಮೂಲಕ ನೀರು ಸರಬರಾಜು ಆರಂಭಿಸಿದ್ದು, ಮುಂದೆ ಮಳೆ ಬಾರದೇ ಹೋದರೆ ಹೆಚ್ಚು ಸಂಖ್ಯೆಯ ಟ್ಯಾಂಕರ್ ಬಳಸಿಕೊಂಡು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.

 

 

ಈ ಬಗ್ಗೆ ಯಶೋಮಾರ್ಗ ಫೌಂಡೇಶನ್ ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ”ರಾಯಚೂರಿನಲ್ಲಿ ಬರದ ನಡುವೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಇದನ್ನು ಮನಗಂಡಂತಹ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ರಾಯಚೂರಿನಲ್ಲಿ ಯಶೋಮಾರ್ಗ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿದ್ದಾರೆ..!” ಎಂದು ಬರೆಯಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top