ಲೋಕಸಭಾ ಚುನಾವಣೆ ಫಲಿತಾಂಶದ ಸಂಪೂರ್ಣ ಫಲಿತಾಂಶ ಹೊರ ಬೀಳುತ್ತಿದ್ದು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಹೀನಾಯ ಪ್ರದರ್ಶನ ತೋರಿದೆ. 22 ರಾಜ್ಯಗಳಲ್ಲಿ ಇದುವರೆಗಿನ ಟ್ರೆಂಡಿಂಗ್ ಪ್ರಕಾರ, ಕಾಂಗ್ರೆಸ್ ಶೂನ್ಯದಿಂದ ಹೊರಬಂದಿಲ್ಲ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಯಾವ ಕ್ಷೇತ್ರಗಳಲ್ಲೂ ಜಯಸಾಧಿಸಲಿಲ್ಲ ಮತ್ತು ಎಲ್ಲೂ ತಮ್ಮ ಸಮೀಪದ ಸ್ಪರ್ಧಿಯ ಎದುರು ಮುನ್ನಡೆಯನ್ನು ಸಾಧಿಸಲಿಲ್ಲ.
ಅತ್ಯಂತ ಕಳಪೆ ಫಲಿತಾಂಶ ಬಂದಿರುವುದರಿಂದ ನಿರಾಸೆಗೊಂಡಿರುವ ಕಾಂಗ್ರೆಸ್ ಬೆಂಬಲಿಗರು ಅಧ್ಯಕ್ಷ ರಾಹುಲ್ ಗಾಂಧಿಯನ್ನೇ ಬದಲಿಸಿ ಎಂದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಟ್ವಿಟ್ಟರ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿರುವ ಕಾಂಗ್ರೆಸ್ ಬೆಂಬಲಿಗರು #ChangeRahul ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
