fbpx
ಸಮಾಚಾರ

“ನಿಖಿಲ್ ಒಳ್ಳೆ ಹುಡ್ಗ, ಅವನು ಗೆಲ್ಲಬೇಕಿತ್ತು” ಸೋಲಿಗೆ 3 ಕಾರಣ ಹೇಳಿದ ಮುನಿರತ್ನ.

ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಿದ್ದಾರೆ. ಮುಖ್ಯಮಂತ್ರಿ ಪುತ್ರನೇ ಅಭ್ಯರ್ಥಿಯಾದ ನಂತರ ಇಡೀ ಸರಕಾರವೇ ಮಂಡ್ಯದಲ್ಲಿ ಪ್ರಚಾರಕ್ಕೆ ನಿಂತಿತು. ಖುದ್ದು ಎಚ್‌ಡಿ ಕುಮಾರಸ್ವಾಮಿ ಇಡೀ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಿದರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ ಸುಮಲತಾ ಅಂಬರೀಷ್‌ ಸುಮಾರು 90 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿ ನಿಖಿಲ್ ಗೆ ಸೋಲುಣಿಸಿದ್ದಾರೆ.

ಮಂಡ್ಯ ಫಲಿತಾಂಶದ ಬಗ್ಗೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಶಾಸಕ, ನಿರ್ಮಾಪಕ ಮುನಿರತ್ನ ಬೇಸರ ವ್ಯಕ್ತಪಡಿಸಿದ್ದು ‘ನಿಖಿಲ್ ಕುಮಾರ್ ಸೋಲಿಗೆ ಮೂರು ಶತ್ರುಗಳು ಕಾರಣ’ ಎಂದಿದ್ದಾರೆ.

”ಶತೃಗಳು ಮೂರು ರೀತಿಯಿರುತ್ತಾರೆ. ಅಂತರಂಗ, ಬಹಿರಂಗ ಹಾಗೂ ಹಿತಶತೃಗಳೆಂಬ ಮೂರು ರೀತಿಯ ಶತೃಗಳು ಇರುತ್ತಾರೆ. ಈ ಮೂವರು ಸೇರಿ ಮಂಡ್ಯದಲ್ಲಿ ನಿಖಿಲ್ ಅವರ ಹಿನ್ನಡೆಗೆ ಕಾರಣ ಆಗಿದ್ದಾರೆ.. ನಿಖಿಲ್ ಬಹಳ ಒಳ್ಳೆಯ ಹುಡುಗ, ಆ ಹುಡುಗನ ವಿರುದ್ಧ ಕೆಲವರು ಕೆಲಸ ಮಾಡಿದ್ರು. ಹಾಗಾಗಿಯೇ ಸೋಲಬೇಕಾಯಿತು” ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top