fbpx
ಸಮಾಚಾರ

ಬೆಂಗಳೂರು ಕೇಂದ್ರ- ಹೀನಾಯ ಸೋಲು ಕಂಡ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರೈ ಪಡೆದ ಮತಗಳೆಷ್ಟು?

ಲೋಕಸಭಾ ಚುನಾವಣೆ ಫಲಿತಾಂಶದ ಸಂಪೂರ್ಣ ಫಲಿತಾಂಶ ಹೊರ ಬೀಳುತ್ತಿದ್ದು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ್‌ ರಾಜ್‌ಗೆ ಹೀನಾಯ ಸೋಲು ಕಂಡಿದ್ದಾರೆ.

ಸದ್ಯ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್ – 4,11,849 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪಿ.ಸಿ. ಮೋಹನ್ 3,99,318 ಮತಗಳನ್ನು ಪಡೆಯುವ ಮೂಲಕ 12,531 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಪ್ರಕಾಶ್ ರಾಜ್ 20,073 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಈತನಕ 8,55,074 ಮತಗಳು ಎಣಿಕೆಯಾಗಿದ್ದು, ಇನ್ನೇನು ಅಂತಿಮ ಫಲಿತಾಂಶ ಹೊರಬೀಳಬೇಕಿದೆ.

ನಟ ಪ್ರಕಾಶ್ ರೈಗೆ 10168 ಮತಗಳನ್ನು ಪಡೆದಿದ್ದು ಠೇವಣಿ ಕಳೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ದೇಶದ ಕಾಸ್ಮೋಪಾಲಿಟಿನ್‌ ಕ್ಷೇತ್ರಗಳ ಪೈಕಿ ಒಂದಾದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್‌ ರೈ ಸ್ಪರ್ಧಿಸುವ ಮೂಲಕ ಸಿನಿಮಾ ಕಳೆ ಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top