fbpx
ಸಮಾಚಾರ

“ಅನರ್ಹಗೊಳ್ಳುತ್ತೇನೆ ಎಂಬ ಭಯದಿಂದಲೇ ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕ” ಎ.ಮಂಜು ಪರ ವಕೀಲ.

ಹಾಸನದಿಂದ ಸ್ಪರ್ಧಿಸಿ ಬಿಜೆಪಿಯ ಎ.ಮಂಜು ಅವರನ್ನು ಸೋಲಿಸಿದ್ದ ಪ್ರಜ್ವಲ್​ ರೇವಣ್ಣ ಈಗ ಅಚ್ಚರಿಯ​ ಹೇಳಿಕೆ ನೀಡಿದ್ದಾರೆ. ಕಾರ್ಯಕರ್ತರು ಹಿರಿಯ ನಾಯಕರು ಆಶೀರ್ವಾದ ಪಡೆದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಇದೀಗ ಈ ಬಗ್ಗೆ ಹೊಸ ಬಾಂಬ್ ಒಂದನ್ನು ಎ.ಮಂಜು ಪರ ವಕೀಲರು ಸಿಡಿಸಿದ್ದು “ಅನರ್ಹಗೊಳ್ಳುತ್ತೇನೆ ಎಂಬ ಭಯದಿಂದಲೇ ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕವಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಎ.ಮಂಜು ವಕೀಲ “ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಬಗ್ಗೆ ಪ್ರಜ್ವಲ್ ಸುಳ್ಳು ಮಾಹಿತಿ ನೀಡಿದ್ದಾರೆ. ಹಾಸನದಲ್ಲಿರೋ ಕಲ್ಯಾಣ ಮಂಟಪ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಪಡೆದಿರೋ ಸಾಲದ ಬಗ್ಗೆ ಮುಚ್ಚಿಟ್ಟಿದ್ದಾರೆ..ದೇವೇಗೌಡರು ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮೊಮ್ಮಗ ಪ್ರಜ್ವಲ್​ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಾಲ ಪಡೆದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಈ ಮೂಲಕ ಚುನಾವಣಾ ಆಯೋಗವನ್ನು ದಾರಿ ತಪ್ಪಿಸಿದ್ದಾರೆ. ಎಲ್ಲಿ ಈ ಬಗ್ಗೆ ತನಿಖೆಯಾಗಿ ತಮ್ಮ ಸ್ಥಾನ ಅನರ್ಹಗೊಳ್ಳುತ್ತದೆಯೋ ಎಂದು ಯೋಚಿಸಿ ಹಾಗಾಗಿಯೇ ರಾಜೀನಾಮೆಯ ನಾಟವಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಏನಿದು ವಿವಾದ:
ಅಂದಹಾಗೆ ಇದೆ ಕುರಿತಾಗಿ ಫಲಿತಾಂಶಕ್ಕೂ ಮುಂಚೆಯೇ ಆಯೋಗಕ್ಕೆ ಮಂಜು ದೂರು ಸಲ್ಲಿಸಿದ್ದರು. ಪ್ರಜ್ವಲ್ ರೇವಣ್ಣ ಅವರ ಆಸ್ತಿ ವಿವರಗಳಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನು ಪರಿಶೀಲಿಸಿದ್ದ ರಾಜ್ಯ ಚುನಾವಣಾ ಆಯೋಗ, ಈ ಬಗ್ಗೆ ವರದಿ ನೀಡುವಂತೆ ಹಾಸನ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಐದು ಪುಟಗಳ ವರದಿ ನೀಡಿದ್ದರು. ಈ ಎಲ್ಲ ಆರೋಪಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದರು.

ಪ್ರಜ್ವಲ್ ರಾಜೀನಾಮೆ ನಿರ್ಧಾರ:
ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರವಾಗಿ ಮಾತನಾಡಿದ್ದಾರೆ. ರಾಜೀನಾಮೆ ವಿಚಾರ ಪ್ರಸ್ತಾಪಿಸದ ಪ್ರಜ್ವಲ್ ರೇವಣ್ಣ ದೇವೇಗೌಡರು ಸೋತಿರುವುದಕ್ಕೆ ನನಗೆ ನೋವಾಗಿದೆ. ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಸೋಲಾಗಿದೆ. ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಮತ್ತೆ ದೇವೇಗೌಡರಿಗೆ ಶಕ್ತಿ ತುಂಬುವುದು ನನ್ನ ಉದ್ದೇಶ. ಹಾಸನ ಜಿಲ್ಲೆಯ ಜನರು ತಪ್ಪು ತಿಳಿಯಬಾರದು. ನಾನು ರಾತ್ರಿ ಇಡೀ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ರಾಜೀನಾಮೆ ಬಗ್ಗೆ ಯಾರೊಂದಿಗೂ ಚರ್ಚೆ ಮಾಡಿಲ್ಲ ಇದು ನನ್ನ ಮನಸ್ಸಿನ ನಿರ್ಧಾರ ಎಂದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top