fbpx
ಸಮಾಚಾರ

ಬೆತ್ತಲೆ ಫೋಟೋ ಕಳಿಸಿ ಎಂದ ಕಾಮುಕನಿಗೆ ನ್ಯೂಡ್ ಫೋಟೋ ಕಳುಹಿಸಿದ ಖ್ಯಾತ ಗಾಯಕಿ.

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಖ್ಯಾತ ಗಾಯಕಿ ಚುನಾಯಿ ಶ್ರೀಪಾದ ಅವರು ಕೂಡ ಇಂಥಾ ಕಾಮುಕರ ಕಾಟಕ್ಕೆ ಸಿಕ್ಕಿದ್ದಾರೆ.

 

ಚಿನ್ಮಯಿ ಶ್ರೀಪಾದ ಅವರಿಗೆ ಕಿಡಿಗೇಡಿ ಯುವಕನೊಬ್ಬ ಬೆತ್ತಲೆ ಫೂಟೊಗಳನ್ನು ಕಳುಹಿಸಿ(send nudes) ಎಂದು ಮೆಸೇಜ್ ಹಾಕಿದ್ದಾನೆ. ಈತನ ಮೆಸೇಜಿಗೆ ಸ್ಮಾರ್ಟ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಚಿನ್ಮಯಿ ನ್ಯೂಡ್ ಲಿಪ್‍ಸ್ಟಿಕ್ (ಮನುಷ್ಯರ ಚರ್ಮಕ್ಕೆ ಹೊಂದಿಕೊಳ್ಳುವ ಲಿಪ್‍ಸ್ಟಿಕ್ ಕಲರ್) ಫೋಟೋಗಳನ್ನು ಕಳುಹಿಸಿ ಮುಖಕ್ಕೆ ಹೊಡೆದಹಾಗೆ ಉತ್ತರಿಸಿದ್ದಾಳೆ. ಅಷ್ಟೇ ಅಲ್ಲದೆ ಫೋಟೋಗಳ ಕೆಳಗೆ ಇವು ನನ್ನ ನೆಚ್ಚಿನ ನ್ಯೂಡ್ ಫೋಟೋಗಳಿವೆ ಎಂದು ಬರೆದು ಸೆಂಡ್ ಮಾಡಿದ್ದಾಳೆ.

ಇನ್ನು ನ್ಯೂಡ್ ಚಿತ್ರ ಕೇಳಿದ ಅಪಾಪೋಲಿಯ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ಅದನ್ನು ಚಿನ್ಮಯಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಚಿನ್ಮಯಿ ಅವರ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top