fbpx
ಸಮಾಚಾರ

ಕ್ಷೇತ್ರಗಳಿಂದ ಪ್ರಜಾಕೀಯ ಪಕ್ಷ ಪಡೆದ ಓಟುಗಳು ಎಷ್ಟು ಗೊತ್ತಾ- ಫಲಿತಾಂಶದ ಬಗ್ಗೆ ಉಪ್ಪಿ ಹೇಳಿದ್ದೇನು?

ನಟ ಉಪೇಂದ್ರ ಸ್ಥಾಪಿಸಿದ್ದ ಉತ್ತಮ ಪ್ರಜಾಕೀಯ ಪಕ್ಷ 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು 28 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಕಡಿಮೆ ಅವಧಿಯಲ್ಲಿಯೇ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ.

1,01,299 ವೋಟು
ಹೊಸದಾಗಿ ಪಕ್ಷವನ್ನು ಸ್ಥಾಪಿಸಿದ್ದ ಉಪೇಂದ್ರ ಅವರು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದು ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಆದರೆ ಜನರನ್ನು ಆಕರ್ಷಿಸುವಲ್ಲಿ ಪ್ರಜಾಕೀಯ ಅಭ್ಯರ್ಥಿಗಳು ಸೋತ್ತಿದ್ದಾರೆ. ಆದರೂ 28 ಕ್ಷೇತ್ರಗಳಿಂದ ಒಟ್ಟು 1,01,299 ವೋಟುಗಳನ್ನ ಪಡೆದುಕೊಂಡಿದೆ.

ಪಕ್ಷದ ಫಲಿತಾಂಶ ಖುಷಿ ತಂದಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ. ನಗರದಲ್ಲಿ ಇಂದು ಬುದ್ಧಿವಂತ – 2 ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಉಪೇಂದ್ರ “ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು. ಈ 5 ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸ್ತಾರೆ ಅನ್ನೋ ಭರವಸೆಯಿದೆ. ಇನ್ನು ಪ್ರಜಾಕೀಯದ ಫಲಿತಾಂಶ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ಮುಂದೆ ಇನ್ನಷ್ಟು ಬೆಳೆಯುವ ಸಾಧ್ಯತೆ ದಟ್ಟವಾಗಿದೆ” ಎಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top