fbpx
ಸಮಾಚಾರ

“ನಿಖಿಲ್​ ಈಗಲೂ ನನ್ನ ಗೆಳೆಯ, ಅವನಿಗೆ ಉತ್ತಮ ಭವಿಷ್ಯವಿದೆ” ಅಭಿಷೇಕ್​ ಅಂಬರೀಶ್​

ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದ್ದ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಿದ್ದಾರೆ. ಸುಮಲತಾ ಅಂಬರೀಷ್‌ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿ ನಿಖಿಲ್ ಗೆ ಸೋಲುಣಿಸಿದ್ದಾರೆ.. ಅತ್ತ ಮೊದಲ ಚುನಾವಣೆಯಲ್ಲಿಯೇ ಸೋಲಿನ ರುಚಿ ಕಂಡ ನಿಖಿಲ್​ ಕುಮಾರಸ್ವಾಮಿ ಸೋಲಿನ ಪರಾಮರ್ಶೆಯಲ್ಲಿದ್ದು, ನಿಖಿಲ್​ ಕುರಿತು ಸುಮಲತಾ ಪುತ್ರ ಅಭಿಷೇಕ್​ ಮಾತನಾಡಿದ್ದಾರೆ.

ಅಂಬರೀಷ್​​ ಅವರು ಅಗಲಿ ಇಂದಿಗೆ ಆರು ತಿಂಗಳು ಕಳೆದಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲು ಅಭಿಷೇಕ್ದ ಮತ್ತು ಸುಮಲತಾ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ನಿಖಿಲ್ ಈಗಲೂ ನನ್ನ ಸ್ನೇಹಿತ” ಎಂದು ಹೇಳಿದ್ದಾರೆ.

“ನಿಖಿಲ್​ ಈಗಲೂ ನನ್ನ ಗೆಳೆಯ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ಕಳೆದ ಎರಡು ತಿಂಗಳಿನಿಂದ ಅವನು ಕೂಡ ಬಿಜಿಯಾಗಿದ್ದಾನೆ. ಅವರು ಅವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು, ಕಳೆದ ಎರಡು ಮೂರು ತಿಂಗಳಿನಿಂದ ಸಂಪರ್ಕದಲ್ಲಿಲ್ಲ. ಆದರೂ ನಿಖಿಲ್ ನಾನು ಈಗಲೂ ಸ್ನೇಹಿತರೇ. ನಿಖಿಲ್​ಗೆ ಒಳ್ಳೆಯ ಭವಿಷ್ಯವಿದೆ. ಈಗ ನಿಖಿಲ್​ಗೆ ಫೋನ್​ ಮಾಡಿದರೆ ತಪ್ಪಾಗುತ್ತದೆ. ಹಾಗಾಗಿ ನಾನು ನಿಖಿಲ್​ಗೆ ಫೋನ್​ ಮಾಡುವುದಿಲ್ಲ. ಮಾಧ್ಯಮಗಳ ಮೂಲಕ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದು ಅಭಿಷೇಕ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top