fbpx
ಸಮಾಚಾರ

ಈ ತಂಡಗಳ ಎದುರು ಆರೇಜ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ .

ಬಹುನಿರೀಕ್ಷಿತ ವಿಶ್ವಕಪ್ ತೀರಣಿಯಲ್ಲಿ​ ಇಂಟರ್​​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ICC) ಮಹತ್ವ ನಿಯಮವನ್ನು ಬದಲಾವಣೆ ಮಾಡಿಕೊಂಡಿದೆ. ಈ ನಿಯಮದ ಅನುಸಾರ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ 2 ಬಣ್ಣಗಳ ಜೆರ್ಸಿಯನ್ನು ಬಳಸಿಕೊಳ್ಳಬಹುದಾಗಿದೆ. ಫುಟ್ಬಾಲ್ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ, ‘ಹೋಂ ಅಂಡ್ ಅವೇ’ ಮಾದರಿಯಲ್ಲಿ ಜೆರ್ಸಿಗಳನ್ನ ಪರಿಚಯಿಸಲಾಗ್ತಿದೆ. ಹೋಂನಲ್ಲಿ ಆಡೋ ತಂಡಗಳ ಜೆರ್ಸಿ ಮತ್ತು ಅವೇನಲ್ಲಿ ಆಡೋ ತಂಡಗಳ ಜೆರ್ಸಿ, ಬೇರೆ ಬೇರೆ ಕಾಣಲಿವೆ.

ಟೀಂ ಇಂಡಿಯಾ ಕೆಲ ಪಂದ್ಯಗಳಲ್ಲಿ ಪ್ರಸ್ತುತವಿರುವ ಬ್ಲೂ ಜೆರ್ಸಿ ಬದಲಾಗಿ ಆರೆಂಜ್ ಸಮವಸ್ತ್ರದಲ್ಲಿ ಕಣಕ್ಕಿಳಿಯಲಿದೆ ಎನ್ನಲಾಗಿದೆ. ಭಾರತ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಇಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಇತರೆ ಮೂರು ತಂಡಗಳ ಜೆರ್ಸಿ ಬಣ್ಣ ಬದಲಾಗಲಿದೆ ಹೇಳಲಾಗಿದೆ.

ಭಾರತ ತಂಡವು ಬ್ಲೂ ಬಾಯ್ಸ್ ಜೆರ್ಸಿಯಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಲಿದ್ದು, ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ವಿರುದ್ಧ ಆರೆಂಜ್ ಜೆರ್ಸಿಯಲ್ಲಿ ವಿರಾಟ್ ಪಡೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದು ಕೇವಲ ಭಾರತ ತಂಡಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಹೀಗಾಗಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಸಮವಸ್ತ್ರದ ಬಣ್ಣಗಳು ಬದಲಾಗಬಹುದು ಎಂದು ವರದಿಯಲ್ಲಿ ತಿಳಿಸಿದೆ.

ಹಾಗೆಯೇ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಜೆರ್ಸಿಯಲ್ಲಿ ಹಸಿರು ಬಣ್ಣವಿರುವುದರಿಂದ ಈ ತಂಡಗಳು ಸಹ ಪರ್ಯಾಯ ಜೆರ್ಸಿ ಆಯ್ಕೆಯನ್ನು ಪಡೆದುಕೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್, ಮೂರು ತಂಡಗಳ ಜೆರ್ಸಿ ಕಲರ್​ ಡಿಫರೆಂಟ್ ಆಗಿರೋದ್ರಿಂದ, ಇವರಿಗೆ ಜೆರ್ಸಿ ಬದಲಾಯಿಸೋ ಅವಕಾಶವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top